ಐಪಿಎಲ್​​ ಬಗ್ಗೆ ಮಾತನಾಡಲು ಎಲ್ಲರಿಗೂ ಭಯ, ವಾಕ್ಸಮರಕ್ಕೆ ಕಾರಣವಾಯ್ತು ಕುಕ್ ಹೇಳಿಕೆ

Share This Newsಕ್ರಿಕೆಟ್ ಜಗತ್ತಿನ ಅತಿದೊಡ್ಡ ಶ್ರೀಮಂತ ಲೀಗ್ ಐಪಿಎಲ್ ಬಗ್ಗೆ ಸಣ್ಣ ಟೀಕೆ ಮಾಡಲು ಕೂಡ ಎಲ್ಲರೂ ಹೆದರುತ್ತಾರೆ ಎಂದುಇಂಗ್ಲೆಂಡ್‌ನ ಮಾಜಿ ನಾಯಕ ಸರ್ ಅಲೆಸ್ಟೇರ್ ಕುಕ್ ಹೇಳಿದ್ದಾರೆ. ಯುವ ಆಟಗಾರ ಜೇಕಬ್ ಬೆಥೆಲ್ ವಿಚಾರದಲ್ಲಿ ಕೆವಿನ್ ಪೀಟರ್ಸನ್ ಮತ್ತು ಕುಕ್ ನಡುವೆ ಶುರುವಾದ ಚರ್ಚೆ, ಈಗ ಐಪಿಎಲ್‌ನ ಹಣದ ಬಲ’ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಕುರಿತಾದ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಒಬ್ಬ ಯುವ ಆಟಗಾರನಿಗೆ ಮೈದಾನದಲ್ಲಿ ಆಡುವ ಅನುಭವ ಮುಖ್ಯವೋ ಅಥವಾ ಸ್ಟಾರ್ ಆಟಗಾರರ ನಡುವೆ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಕಲಿಯುವುದು ಮುಖ್ಯವೋ? ಈ ಒಂದು ಪ್ರಶ್ನೆ ಈಗ ಇಂಗ್ಲೆಂಡ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಐಪಿಎಲ್‌ನ ಹೊಳಪಿನ ಹಿಂದೆ ಅಡಗಿರುವ ಅಲಿಖಿತ ನಿಯಮಗಳ ಬಗ್ಗೆ ಅಲೆಸ್ಟೇರ್ ಕುಕ್ ಬಿಚ್ಚಿಟ್ಟಿರುವ ಸತ್ಯಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಜೇಕಬ್ ಬೆಥೆಲ್ ಅವರ ಐಪಿಎಲ್ ಭವಿಷ್ಯದ ಕುರಿತು ಇಂಗ್ಲೆಂಡ್‌ನ ಮಾಜಿ ದಿಗ್ಗಜರಾದ ಅಲೆಸ್ಟೇರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ನಡುವಿನ ವಾಕ್ಸಮರಇದೀಗ ಹೊಸ ರೂಪ ಪಡೆದುಕೊಂಡಿದೆ. ಐಪಿಎಲ್ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಬಾಸ್‌’ಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ ಎಂದು ಕುಕ್ ಹೇಳಿದ್ದಾರೆ. Share This News