ನಿಲ್ಲದ ಬೀದಿನಾಯಿಗಳ ಹಾವಳಿ, ರೊಚ್ಚಿಗೆದ್ದ ಶಿವಮೊಗ್ಗ ? ಕಾರಣ ಕೇಳಿದ್ರೆ ಬೆಚ್ಚಿ ಬೀಳುವುದು ಗ್ಯಾರಂಟಿ
Share This Newsನಿಲ್ಲದ ಬೀದಿನಾಯಿಗಳ ಹಾವಳಿ, ರೊಚ್ಚಿಗೆದ್ದ ಶಿವಮೊಗ್ಗ ? ಕಾರಣ ಕೇಳಿದ್ರೆ ಬೆಚ್ಚಿ ಬೀಳುವುದು ಗ್ಯಾರಂಟಿ ಏನು ಅರಿಯದ ಕಂದಮ್ಮ ಅಂಗಳದಲ್ಲಿ ಆಟವಾಡುತ್ತಿತ್ತು. ಆ ಕಂದಮ್ಮ ನಗು ಮರೆಮಾಡುವುದಕ್ಕೆ ಅಂತ ಬಂದೇ ಬಿಡ್ತು ಬೀದಿ ನಾಯಿ. ಹೌದು ಈ ಘಟನೆ ನಡೆದಿರುವುದು ಶಿವಮೊಗ್ಗದ ಸೋಮಿನಕೊಪ್ಪ ಬಡಾವಣೆಯ ಮನೆ ಮುಂಭಾಗವೊಂದರಲ್ಲಿ ಈ ನಾಯಿ ಮೇಲೆ ಮಾತ್ರ ಅಟ್ಯಾಕ್ ಮಾಡಿದ್ದಲ್ಲದೆ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿತ್ತು. ಈ ರೌಡಿ ನಾಯಿಗೆ4 ವರ್ಷದ ಇರ್ಜಾ ಕೌನೇನ್ ಹಾಗೂ ಕೃಷ್ಣಾನಾಯ್ಕ್ ಎಂಬುವರು ಬಲಿಯಾಗಿದ್ದಾ ರೆ ಎನ್ನಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕಿ ಮೇಲೆ ನಾಯಿ ದಾಳಿ ನಡೆಸಿ, ಐದಾರು ಕಡೆ ಕಚ್ಚಿದೆ. ಬಾಲಕಿಯ ಕಿರುಚಾಟ ಗಮನಿಸಿ ನೆರೆಹೊರೆಯವರು ನಾಯಿಯನ್ನು ಓಡಿಸಿದ್ದಾರೆ. ಸೋಮಿನಕೊಪ್ಪ ಬಡಾವಣೆ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ತಕ್ಷಣವೇ ಇವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೃಷ್ಣಾನಾಯ್ಕ್ ಎಂಬುವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಅವರ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ಹಾಗೆಯೇ ಆಕಳ ಕರುವೊಂದರ ಮೇಲೆಯೂ ದಾಳಿ ನಡೆಸಿದೆ. ತಕ್ಷಣವೇ ಸದರಿ ನಾಯಿಯನ್ನು ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ ಒಟ್ಟಿನಲ್ಲಿ ಶಿವಮೊಗ್ಗದ ಜನ ಬೀದಿ ನಾಯಿ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಬ್ರೇಕ್ ಬೀಳುತ್ತಾ ಎನ್ನುವುದು ಕಾದು ನೋಡಬೇಕಿದೆ. Share This News
Copy and paste this URL into your WordPress site to embed
Copy and paste this code into your site to embed