ಭಾರತೀಯ ವಾಸ್ತುಶಿಲ್ಪ ಮತ್ತು ವಿಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾದ ‘ಪಿನ್‌ಹೋಲ್ ಕ್ಯಾಮೆರಾ’
Share This Newsಹಂಪಿ ಹಿಂದಿನಿಂದಲೂ ಇಂದಿಗೂ ಇತಿಹಾಸ ಪುಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಂಪಿಯನ್ನು ನೋಡಲು ದೇಶ-ವಿದೇಶಿಗರ ದಂಡು ಬರುತ್ತಲೇ ಇರುತ್ತದೆ. ಇತ್ತಿಚಿಗೆ ಹಂಪಿಯಲ್ಲಿ 500 ವರ್ಷ ಹಳೆಯ ‘ಲೈವ್’ ಕ್ಯಾಮೆರಾ ದ ಬಗ್ಗೆ ಕೆಲ ವಿಶೇಷ ಮಾಹಿತಿ ಹೊರ ಬಿಳುತ್ತಿದೆ. ಹಾಗಾದ್ರೆ ಆ ಮಾಹಿತಿ ಇಲ್ಲಿದೆ ನೋಡಿ. ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು ಒಂದು ಆಕರ್ಷಕ ಅದ್ಭುತವನ್ನು ಹೊಂದಿದೆ. ದೇವಾಲಯದ ಗೋಪುರದ ನೆರಳು ನೆಲದ ಮೇಲೆ ಬೀಳುವುದಿಲ್ಲ, ಬದಲಾಗಿ, ಅದು ಗರ್ಭಗುಡಿಯೊಳಗೆ ಒಂದು ಸಣ್ಣ ರಂಧ್ರದ ಮೂಲಕ ಹಾದುಹೋಗುತ್ತದೆ ಮತ್ತು ಗೋಡೆಯ ಮೇಲೆ ತಲೆಕೆಳಗಾಗಿ ಕಾಣಿಸಿಕೊಳ್ಳುತ್ತದೆ, 15 ನೇ ಶತಮಾನದಷ್ಟು ಹಿಂದೆಯೇ ನಮ್ಮ ಕುಶಲಕರ್ಮಿಗಳು ‘ಪಿನ್‌ಹೋಲ್ ಕ್ಯಾಮೆರಾ’ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡರು ಎಂಬುದು ಇಂದಿಗೂ ನಿಗೂಢವಾಗಿದೆ. ಇದು ಸುಮಾರು 7ನೇ ಶತಮಾನದ ವಾಸ್ತುಶಿಲ್ಪದ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ವಿರೂಪಾಕ್ಷ ದೇವಸ್ಥಾನದಲ್ಲಿ ಕಂಡುಬರುವ ‘ಪಿನ್‌ಹೋಲ್ ಕ್ಯಾಮೆರಾ’ ತಂತ್ರಜ್ಞಾನವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ಮತ್ತು ವಿಜ್ಞಾನವನ್ನು ಎತ್ತಿ ತೊರಿಸುತ್ತಿದೆ. ಗೋಪುರದ ಸಣ್ಣ ರಂಧ್ರವೊಂದು ‘ಅಪರ್ಚರ್’ ನಂತೆ ಕಾರ್ಯನಿರ್ವಹಿಸುತ್ತದೆ. ಹೊರಗಿನ ಬೆಳಕು ಈ ರಂಧ್ರದ ಮೂಲಕ ಹಾದುಹೋಗಿ, ಕತ್ತಲೆಯ ಕೋಣೆಯ ಒಳಗೆ ಚಿತ್ರ ತೊರಿಸುತ್ತದೆ. ದೇವಸ್ಥಾನದ ಒಳಭಾಗದಲ್ಲಿರುವ ಕತ್ತಲೆಯ ಕೋಣೆಯೊಂದರ ಗೋಡೆಯ ಮೇಲೆ, ಮುಖ್ಯ ಗೋಪುರದ ತಲೆಕೆಳಗಾದ ಚಿತ್ರವು ಸ್ಪಷ್ಟವಾಗಿ ಬೀಳುತ್ತದೆ. ಇದು ನೈಸರ್ಗಿಕ ‘ಕ್ಯಾಮೆರಾ ಅಬ್ಸ್ಕ್ಯೂರಾ’ ಪರಿಣಾಮವಾಗಿದೆ. ಅರೇಬಿಯನ್ ವಿದ್ವಾಂಸ ಇಬ್ನ್ ಅಲ್-ಹೈಥಮ್ ಈ ತಂತ್ರಜ್ಞಾನದ ಬಗ್ಗೆ ತಿಳಿಸುವುದಕ್ಕಿಂತ ಸುಮಾರು 2.5 ಶತಮಾನಗಳ ಮೊದಲೇ ಹಂಪಿಯ ದೇವಸ್ಥಾನದಲ್ಲಿ ಇದನ್ನು ಬಳಸಲಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಲಕ್ಕಣ್ಣ ದಂಡೇಶ ಎಂಬ ನಾಯಕ, ದೇವ ರಾಯ II ರ ಆಳ್ವಿಕೆಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ.ಹಂಪಿಗೆ ಭೇಟಿ ನೀಡಿದಾಗ, ವಿರೂಪಾಕ್ಷ ದೇವಸ್ಥಾನದ ಒಳಗೆ ಈ ನೈಸರ್ಗಿಕ ದೃಶ್ಯವನ್ನು ನೋಡುವುದು ಒಂದು ಅದ್ಭುತವೇ ಸರಿ ಹಾಗಾದ್ರೆ ಈ ಪಿನ್‌ಹೋಲ್ ಕ್ಯಾಮೆರಾ ಎಂದರೇ ಎನು? ಇದು ಒಂದು ಲೆನ್ಸ್ ಇಲ್ಲದ, ಅತ್ಯಂತ ಸರಳವಾದ ತಂತ್ರಜ್ಞಾನ ಬಳಸುವ ಕ್ಯಾಮೆರಾ ಆಗಿದೆ. ಇದು ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎನ್ನುವ … Continue reading ಭಾರತೀಯ ವಾಸ್ತುಶಿಲ್ಪ ಮತ್ತು ವಿಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾದ ‘ಪಿನ್‌ಹೋಲ್ ಕ್ಯಾಮೆರಾ’
Copy and paste this URL into your WordPress site to embed
Copy and paste this code into your site to embed