
ಜೋರಾಯಿತು ಅಭಿಮಾನಿಗಳ ಅಬ್ಬರ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು ಮಣ್ಣುಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಭಾರಿಗೆ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ. ಬ್ಯಾಕ್ ಟು ಬ್ಯಾಕ್ ಟ್ರೋಫಿ ನೀಡಿ ಗೆಲುವಿನೊಂದಿಗೆ
ಉತ್ತರ ಕೊಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಕೇವಲ ಅಭಿಮಾನಿಗಳ ನೆಚ್ಚಿನ ತಂಡವಲ್ಲ, ಐಪಿಎಲ್ ಇತಿಹಾಸದಲ್ಲಿ ತನ್ನದೇ ಅಧ್ಯಾಯ ಬರೆದಿರುವ ಚಾಂಪಿಯನ್ ತಂಡವಾಗಿದೆ. ಸತತ ಎರಡು ಕಿರೀಟಗಳನ್ನು ಗೆದ್ದು ಆರ್‌ಸಿಬಿ ತನ್ನ ಬಗ್ಗೆ ಇದ್ದ ಹಲವು ಅನುಮಾನಗಳು, ಟೀಕೆಗಳಿಗೆ ಬ್ರೇಕ್ ಹಾಕಿದೆ.
2025ರಲ್ಲಿ ಮೊದಲ ಕಿರೀಟ ಗೆದ್ದ ಬಳಿಕ, 2026ರಲ್ಲೂ ಚಾಂಪಿಯನ್ ಆಗುವ ಮೂಲಕ ಬೆಂಗಳೂರು ತಂಡ ತನ್ನ ಯಶಸ್ಸು ಆಕಸ್ಮಿಕವಲ್ಲ ಎಂಬುದನ್ನು ಸಾಬೀತುಪಡಿಸಿದೆ.
