ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಯೋಜನೆಗಳನ್ನು ಘೋಷಿಸಿದ್ದು, ಮೈಸೂರಿನ ಹೆಚ್ಚುತ್ತಿರುವ ಬಸ್ ಸಂಚಾರ ಮತ್ತು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೊಸ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಮೈಸೂರಿನಲ್ಲಿ ಹೊಸ ಬಸ್ ನಿಲ್ದಾಣಗಳ ವಿವರ:
ಹೊಸ ಗ್ರಾಮಾಂತರ ಬಸ್ ನಿಲ್ದಾಣ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರ ಸುಗಮಗೊಳಿಸಲು ಈ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬನ್ನಿಮಂಟಪದಲ್ಲಿ ಹೈಟೆಕ್ ಬಸ್ ನಿಲ್ದಾಣ 127 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಕ್ಕೆ ಸರ್ಕಾರ ಅಸ್ತು ನೀಡಿದೆ. 64 ಎಕರೆ ಪ್ರದೇಶದಲ್ಲಿ, 14 ಎಕರೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಬಸ್ ನಿಲ್ದಾಣ ನಿರ್ಮಾಣ. ಗ್ರೌಂಡ್ ಫ್ಲೋರ್ ಜೊತೆಗೆ ಮೂರು ಹಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಏಪ್ರಿಲ್ 2025ಲ್ಲಿ ಕಾಮಗಾರಿ ಆರಂಭವಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ.
100 ವಿದ್ಯುತ್ ಚಾಲಿತ ಬಸ್ಗಳ ಪ್ರಸ್ತಾವನೆ ಮೈಸೂರಿಗೆ 100 ಎಲೆಕ್ಟ್ರಿಕ್ ಬಸ್ಗಳನ್ನು ತರಲು ಯೋಜನೆ. ಬನ್ನಿಮಂಟಪ ಡಿಪೋದಲ್ಲಿ ನಿರ್ವಹಣೆಗಾಗಿ ಸಿದ್ಧತೆ. ನಗರದ ಸಬರ್ಬನ್ ನಿಲ್ದಾಣದ ಒತ್ತಡ ಕಡಿಮೆ ಮಾಡಲು ಪ್ರತಿದಿನ 2700 ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿರುವ ಸಬರ್ಬನ್ ನಿಲ್ದಾಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಹೊಸ ನಿಲ್ದಾಣಗಳು ಅಗತ್ಯವಾಗಿದೆ.
ಒಟ್ಟು ನಾಲ್ಕು ಹೊಸ ಬಸ್ ನಿಲ್ದಾಣಗಳು ಮೈಸೂರಿನಲ್ಲಿ ನಿರ್ಮಾಣವಾಗಲಿವೆ. ಪ್ರಾದೇಶಿಕ ಸಾರಿಗೆ ಇಲಾಖೆ ಈಗಾಗಲೇ 648 ಕೋಟಿ ರೂ. ರಾಜಸ್ವ ಸಂಗ್ರಹಿಸಿದೆ, ಇದರಿಂದ ಯೋಜನೆಗಳಿಗೆ ಹಣಕಾಸು ಬೆಂಬಲ.
ಆನ್ಲೈನ್ ಸೇವೆಗಳು: ಸಾರಿಗೆ ಇಲಾಖೆಯ 31 ಸೇವೆಗಳನ್ನು ಸಕಾಲದಲ್ಲಿ ಆನ್ಲೈನ್ ಮೂಲಕ ನೀಡಲಾಗುತ್ತಿದೆ.
ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯ ಮತ್ತು ಆರಾಮದಾಯಕ ಪ್ರಯಾಣ. ವಾಹನ ದಟ್ಟಣೆ ಕಡಿಮೆ ಆಗಿ ನಗರ ಸಂಚಾರ ಸುಗಮವಾಗಲಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಗಳು ನಗರದಲ್ಲಿ ಹಸಿರು ಸಾರಿಗೆಗೆ ಉತ್ತೇಜನ ನೀಡಲಿವೆ. ಒಟ್ಟಿನಲ್ಲಿ, ಮೈಸೂರಿನ ಸಾರಿಗೆ ವ್ಯವಸ್ಥೆ ಮುಂದಿನ ಕೆಲವು ವರ್ಷಗಳಲ್ಲಿ ಸಂಪೂರ್ಣವಾಗಿ ರೂಪಾಂತರಗೊಳ್ಳಲಿದೆ. ಹೊಸ ಬಸ್ ನಿಲ್ದಾಣಗಳು, ಎಲೆಕ್ಟ್ರಿಕ್ ಬಸ್ಗಳು ಮತ್ತು ಹೈಟೆಕ್ ಸೌಲಭ್ಯಗಳು ಮೈಸೂರನ್ನು ಕರ್ನಾಟಕದ ಅತ್ಯಾಧುನಿಕ ಸಾರಿಗೆ ಕೇಂದ್ರಗಳಲ್ಲಿ ಒಂದಾಗಿ ರೂಪಿಸುವತ್ತ ಹೆಜ್ಜೆ ಇಡುತ್ತಿವೆ.
