ಮಿನಿಯಾಪೊಲಿಸ್‌ನಲ್ಲಿ ನಡೆದ ವಲಸೆ ಅಧಿಕಾರಿಯ ಗುಂಡಿನ ದಾಳಿಯ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಅಧಿಕಾರಿಯ ಫೋನ್‌ನಲ್ಲಿ ದಾಖಲಾಗಿದ್ದ 47 ಸೆಕೆಂಡ್‌ಗಳ ವಿಡಿಯೋ ಬಿಡುಗಡೆಗೊಂಡಿದ್ದು, ಇದು ಸೆಲ್ಫ್ ಡಿಫೆನ್ಸ್ ವಾದಕ್ಕೆ ಮತ್ತೊಂದು ತಿರುವು ನೀಡಿದೆ.

ಘಟನೆ: ಜನವರಿ 7, 2026ರಂದು ಮಿನಿಯಾಪೊಲಿಸ್‌ನಲ್ಲಿ U.S. Immigration and Customs Enforcement (ICE) ಅಧಿಕಾರಿ, ರೆನೆ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಂದ ಘಟನೆ.

ಹೊಸ ವಿಡಿಯೋ: ICE ಅಧಿಕಾರಿಯ ಫೋನ್‌ನಲ್ಲಿ ದಾಖಲಾಗಿದ್ದ 47 ಸೆಕೆಂಡ್‌ಗಳ ವಿಡಿಯೋ ಬಿಡುಗಡೆ. ವಿಡಿಯೋದಲ್ಲಿ ಗುಡ್ ತನ್ನ SUV ಕಾರಿನಲ್ಲಿದ್ದ ದೃಶ್ಯಗಳು, ಅಧಿಕಾರಿಯು ಕಾರಿನ ಮುಂದೆ ಸುತ್ತಾಡುತ್ತಿರುವುದು ಕಾಣಿಸುತ್ತದೆ. ಗುಡ್ “That’s fine, dude. I’m not mad” ಎಂದು ಹೇಳಿದ ಕ್ಷಣಗಳೂ ದಾಖಲಾಗಿದೆ.

ಅಧಿಕಾರಿ ಜೊನಾಥನ್ ರಾಸ್ ಅವರು ಮತ್ತು ರೆನೀ ನಿಕೋಲ್ ಗುಡ್‌ ಮಧ್ಯೆ ನಡೆದ ವಾಗ್ವಾದ 47 ಸೆಕೆಂಡುಗಳ ವಿಡಿಯೋದಲ್ಲಿ,ಅಧಿಕಾರಿ ಜೊನಾಥನ್ ರಾಸ್ ಒಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ರೆನೆ ಗುಡ್ ಅವರ ಕಾರನ್ನು ಸುತ್ತುವರಿಯುವುದು ಕಂಡುಬರುತ್ತದೆ. ಈ ವೇಳೆ ರೆನೀ ನಿಕೋಲ್ ಗುಡ್‌ ಕೂಡ ಹೊರಗಿನಿಂದ ವಿಡಿಯೋ ಚಿತ್ರೀಕರಿಸುತ್ತಿರುತ್ತಾರೆ. ನಾನು ನಿಮ್ಮ ಮೇಲೆ ಸಿಟ್ಟಾಗಿಲ್ಲ ಎಂದು ಹೇಳಿದ್ದಾರೆ. ಆಗ ಅಧಿಕಾರಿ, ಕಾರಿನಿಂದ ಹೊರಬನ್ನಿ ಎಂದು ಕೂಗಾಡುತ್ತಾರೆ. ಈ ವೇಳೆ ರೆನೀ ಕಾರನ್ನು ಹಿಂದಕ್ಕೆ ತೆಗೆದು ನಂತರ ಮುಂದಕ್ಕೆ ಚಲಿಸಿದಾಗ ಗುಂಡು ಹಾರಿಸಿದ್ದಾರೆ. ಜೊತೆಗೆ, ಕಾರು ರಸ್ತೆಯ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ದೃಶ್ಯವೂ ವಿಡಿಯೋದಲ್ಲಿದೆ.

ಅಧಿಕಾರಿಯ ವಾದ: ಅಧಿಕಾರಿಯು “ಮಹಿಳೆ ಕಾರನ್ನು ಅಧಿಕಾರಿಗಳ ಕಡೆಗೆ ಚಲಾಯಿಸುತ್ತಿದ್ದಳು, ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು” ಎಂದು ಹೇಳಿದ್ದಾನೆ.

ಕಾನೂನು: ಮಿನೆಸೋಟಾ ಪ್ರಾಸಿಕ್ಯೂಟರ್ ಸಾರ್ವಜನಿಕರಿಂದ ಹೆಚ್ಚಿನ ಸಾಕ್ಷ್ಯಗಳನ್ನು ಒದಗಿಸಲು ಕೋರಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ. ರಾಜಕೀಯ: ಉಪಾಧ್ಯಕ್ಷ JD Vance ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ, “ಅಧಿಕಾರಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ” ಎಂದು ಸಮರ್ಥನೆ. ಟ್ರಂಪ್ ಆಡಳಿತವು ಅಧಿಕಾರಿಯನ್ನು ಬೆಂಬಲಿಸಿದೆ. ಸಾಮಾಜಿಕ: ಮಿನಿಯಾಪೊಲಿಸ್ ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆಗಳು. ವಲಸೆ ನಿಯಂತ್ರಣ ಕ್ರಮಗಳ ವಿರುದ್ಧ ಜನರ ಆಕ್ರೋಶ.

ಹೊಸ ವಿಡಿಯೋ ಬಿಡುಗಡೆ ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ. ಅಧಿಕಾರಿಯ ಆತ್ಮರಕ್ಷಣೆ ವಾದಕ್ಕೆ ಬೆಂಬಲ ದೊರಕಿದರೂ, ಸಾರ್ವಜನಿಕರಲ್ಲಿ ವಲಸೆ ನಿಯಂತ್ರಣದ ತಂತ್ರಗಳು ಮತ್ತು ಪೊಲೀಸರ ಕ್ರಮಗಳ ವಿರುದ್ಧ ಆಕ್ರೋಶ ಹೆಚ್ಚಾಗಿದೆ.