ಬೆಳಗಾವಿಯಲ್ಲಿ 9 ದಿನಗಳ ಕಾಲ ನಡೆದ ಸಕ್ಕರೆಕಬ್ಬು ರೈತರ ಹೋರಾಟ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ರಾಜ್ಯ ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸಿ, ಪ್ರತಿ ಟನ್ ಕಬ್ಬಿಗೆ ₹3300 ಬೆಲೆ ನಿಗದಿಪಡಿಸುವ ಭರವಸೆ ನೀಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಾವಿರಾರು ಕಬ್ಬು ರೈತರು ಯೋಗ್ಯ ಬೆಲೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೆಲವೆಡೆ ಕಲ್ಲು ತೂರಾಟದಂತಹ ಘಟನೆಗಳು ಸಂಭವಿಸಿದವು, ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ರೈತರು ಮಹಾರಾಷ್ಟ್ರದಲ್ಲಿ ಸಿಗುವ ಬೆಲೆ ಕರ್ನಾಟಕದಲ್ಲೂ ಸಿಗಬೇಕು ಎಂಬ ಹಕ್ಕೊತ್ತಾಯವನ್ನು ಮುಂದಿಟ್ಟಿದ್ದರು.

ಸರ್ಕಾರದ ಪ್ರತಿಕ್ರಿಯೆ
• ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, ರೈತರ ಮನವಿಗೆ ಸ್ಪಂದಿಸಿದರು.
• ಸರ್ಕಾರವು ಕಟಾವು ವೆಚ್ಚ ಮತ್ತು ಸರಬರಾಜು ವೆಚ್ಚ ಹೊರತುಪಡಿಸಿ ₹3300 ಬೆಲೆ ನಿಗದಿಪಡಿಸಿದೆ.
• “ಪ್ರತಿಭಟನೆ ಬಿಡಿ, ಸಹಕಾರ ನೀಡಿ” ಎಂಬ ಮನವಿಯನ್ನು ಸಿಎಂ ರೈತರಿಗೆ ಸಲ್ಲಿಸಿದರು

12 ತಿಂಗಳು ಕಷ್ಟಪಟ್ಟು ಬೆಳೆಸಿದರೂ ಯೋಗ್ಯ ಬೆಲೆ ಸಿಗುತ್ತಿಲ್ಲ” ಎಂಬ ಅಸಮಾಧಾನ ರೈತರಲ್ಲಿ ವ್ಯಕ್ತವಾಯಿತು. “ಕಾರ್ಖಾನೆ ಮಾಲೀಕರು ಶ್ರೀಮಂತರಾಗುತ್ತಿದ್ದಾರೆ, ಆದರೆ ನಾವು ಹೋರಾಟ ಮಾಡಬೇಕಾಗಿದೆ” ಎಂಬ ಮಾತುಗಳು ಪ್ರತಿಭಟನೆಯ ತೀವ್ರತೆಯನ್ನು ತೋರಿಸುತ್ತವೆ.


ಈ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಆದರೆ ನೆರೆ-ಬರ ಪರಿಹಾರ ಇರಲಿ, ಗೊಬ್ಬರ ವಿತರಣೆ ಇರಲಿ, ಖರೀದಿ ಕೇಂದ್ರಗಳ ತೆರೆಯುವಿಕೆ ಇರಲಿ, ಈ ಸರ್ಕಾರ ಬಂದಾಗಿನಿಂದ ಕಳೆದ ಎರಡೂವರೆ ವರ್ಷಗಳಲ್ಲಿ ರೈತರಿಗೆ ಸಂಬಂಧಪಟ್ಟ ಬಹುತೇಕ ನಿರ್ಧಾರಗಳು ಘೋಷಣೆ, ಭರವಸೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನೂ ಪ್ರಾಮಾಣಿಕವಾಗಿ ಜಾರಿ ಮಾಡುವ ಬಗ್ಗೆ ನಮಗೆ ಅನುಮಾನಗಳಿವೆ.


ರೈತರು ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದರೂ, ಭರವಸೆಗಳನ್ನು ಜಾರಿಗೆ ತರಲು ಸರ್ಕಾರದ ಕ್ರಮಗಳ ಮೇಲೆ ನಿಗಾ ಇಡಲಾಗುತ್ತಿದೆ. ಕಬ್ಬು ನಿಯಂತ್ರಣ ಮಂಡಳಿ ಸ್ಥಾಪನೆ ಮತ್ತು ದೀರ್ಘಕಾಲಿಕ ಬೆಲೆ ನಿಗದಿ ಕುರಿತಂತೆ ಮುಂದಿನ ಹಂತಗಳಲ್ಲಿ ಚರ್ಚೆ ನಿರೀಕ್ಷಿಸಲಾಗಿದೆ.