ಸರ್ಕಾರಿ ಶಾಲೆಗಾಗಿ ಕಾಕತೀಯರ ಕಾಲದ ಶಿವ ದೇವಾಲಯ ನೆಲಸಮ – ಇತಿಹಾಸ ತಜ್ಞರ ತೀವ್ರ ಆಕ್ರೋಶ
Share This Newsಹೈದರಾಬಾದ್: ಸರ್ಕಾರಿ ಶಾಲೆಗಾಗಿ 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಿದ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ. ದೇವಾಲಯ ಕೆಡವಿದ್ದ ಹಿನ್ನಲೆ, ಸಾರ್ವಜನಿಕರು, ಇತಿಹಾಸ ತಜ್ಞರು ಆಕ್ರೋಶ ಹೊರಹಾಕಿದ್ದಾರೆ. ಖಾನಾಪುರ ಮಂಡಲದ ಅಶೋಕ್ ನಗರದಲ್ಲಿರುವ ಈ ದೇವಾಲಯ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ ಕಾಲದ್ದಾಗಿದೆ.1965 ರಲ್ಲಿ ಪರಂಪರೆ ಇಲಾಖೆಯಿಂದ ದಾಖಲಿಸಲ್ಪಟ್ಟ ಈ ದೇವಾಲಯ ಪ್ರಾಚೀನ ಕೋಟೆಗಳಿಗೆ ಹೆಸರುವಾಸಿಯಾದ ಐತಿಹಾಸಿಕ ಕೋಟ ಕಟ್ಟ ಎಂಬ ಮಣ್ಣಿನ ಕೋಟೆ ಪ್ರದೇಶದೊಳಗೆ ಇತ್ತು. ಈ ಪರಂಪರೆಯ ತಾಣ ಸುಲಭವಾಗಿ ಸಂರಕ್ಷಿಸಬಹುದಿತ್ತು. ಇಲ್ಲವೇ ಸ್ಥಳಾಂತರಿಸಬಹುದಿತ್ತು ಎಂಬುದು ತಜ್ಞರು ಮಾತಾಗಿದೆ. Share This News
Copy and paste this URL into your WordPress site to embed
Copy and paste this code into your site to embed