ಹೈದರಾಬಾದ್: ಸರ್ಕಾರಿ ಶಾಲೆಗಾಗಿ 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಿದ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ. ದೇವಾಲಯ ಕೆಡವಿದ್ದ ಹಿನ್ನಲೆ, ಸಾರ್ವಜನಿಕರು, ಇತಿಹಾಸ ತಜ್ಞರು ಆಕ್ರೋಶ ಹೊರಹಾಕಿದ್ದಾರೆ.
ಖಾನಾಪುರ ಮಂಡಲದ ಅಶೋಕ್ ನಗರದಲ್ಲಿರುವ ಈ ದೇವಾಲಯ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ ಕಾಲದ್ದಾಗಿದೆ.
1965 ರಲ್ಲಿ ಪರಂಪರೆ ಇಲಾಖೆಯಿಂದ ದಾಖಲಿಸಲ್ಪಟ್ಟ ಈ ದೇವಾಲಯ ಪ್ರಾಚೀನ ಕೋಟೆಗಳಿಗೆ ಹೆಸರುವಾಸಿಯಾದ ಐತಿಹಾಸಿಕ ಕೋಟ ಕಟ್ಟ ಎಂಬ ಮಣ್ಣಿನ ಕೋಟೆ ಪ್ರದೇಶದೊಳಗೆ ಇತ್ತು. ಈ ಪರಂಪರೆಯ ತಾಣ ಸುಲಭವಾಗಿ ಸಂರಕ್ಷಿಸಬಹುದಿತ್ತು. ಇಲ್ಲವೇ ಸ್ಥಳಾಂತರಿಸಬಹುದಿತ್ತು ಎಂಬುದು ತಜ್ಞರು ಮಾತಾಗಿದೆ.
