Share This News

ಚೆನ್ನೈ: ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ನೀಡಲು ನಿಂತಿವೆ. ರಾಜ್ಯದಲ್ಲಿ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮೊದಲೇ ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲ ಘೋಷಿಸಿತ್ತು. ಈಗ ಎಡಪಕ್ಷಗಳು ಮತ್ತು ತಿರುಮಾವಳವನ್ ನೇತೃತ್ವದ ವಿಸಿಕೆ ಕೂಡ ಕೈಜೋಡಿಸುತ್ತಿರುವುದು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಿಗೆ ಮತ್ತು ದೊಡ್ಡ ಸವಾಲಾಗಿದೆ

ಈ ಮಹತ್ವದ ಮೈತ್ರಿಯ ಕುರಿತು ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಮೈತ್ರಿ ಸಮಾಲೋಚನೆಗಳು ಅಂತಿಮ ಹಂತ ತಲುಪಿದ್ದು, ವಿಜಯ್ ಅವರು ಇಂದು ಸಂಜೆ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.


Share This News