ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತಪತ್ರಗಳ ಮತ ಎಣಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಟಿಡಿ ರಾಜೇಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಅಷ್ಟೇ ತಿಳಿದು ಬಂದಿದೆ.
. 279 ತಿರಸ್ಕೃತಗೊಂಡ ಮತಗಳಲ್ಲಿ ಲೋಪಗಳಿಲ್ಲದಿದ್ದರೆ ಪರಿಗಣಿಸಬೇಕು ಒಟ್ಟು ಅಂಚೆ ಮತ ಪತ್ರಗಳೊಂದಿಗೆ ಪರಿಗಣಿಸಲು ಹೈಕೋರ್ಟ್ ಆದೇಶ ನೀಡಿತ್ತು. ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶ ನೀಡಿತ್ತು ಮರುಮತ ಎಣಿಕೆಯಲ್ಲಿ ಡಿ ಎನ್ ಜೀವರಾಜ್ ವಿಜೇತರೆಂದು ಘೋಷಿಸಲಾಗಿತ್ತು. ಈ ಕಾರಣಕ್ಕಾಗಿ ಈಗ ಸುಪ್ರೀಂ ಕೋರ್ಟಿಗೆ ಟಿಡಿ ರಾಜೇಗೌಡ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಮಾಹಿತಿ ಬೆಳಕಿಗೆ ಬಂದಿದೆ
