Share This News

ಕರಾವಳಿಯ ಪವಿತ್ರ ಪುಣ್ಯಕ್ಷೇತ್ರ, ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು, ಹೆಗ್ಗಡೆಯವರ ಘನತೆಗೆ ಧಕ್ಕೆ ತರಲು ಮಹಾಸಂಚೊಂದು ರೂಪಿತವಾಗಿದೆಯೇ? ಹೌದು, ಇಂತಹದ್ದೊಂದು ಆಘಾತಕಾರಿ ಮತ್ತು ಸ್ಪೋಟಕ ಮಾಹಿತಿ ಈಗ ಹೊರಬಿದ್ದಿದೆ. ಧರ್ಮಸ್ಥಳದ ಹೆಸರನ್ನು ಕೆಡಿಸಲು, ವ್ಯವಸ್ಥಿತ ಪಿತೂರಿ ನಡೆಸಲು ಬರೊಬ್ಬರಿ 200 ಕೋಟಿ ರೂಪಾಯಿಗಳ ಡೀಲ್ ಕುದುರಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದರೆ ಯಾರು ಈ ಸಂಚಿನ ಸೂತ್ರಧಾರರು? ಈ 200 ಕೋಟಿಯ ಸೀಕ್ರೆಟ್ ಡೀಲ್ ಹಿಂದಿರೋ ಕರಾಳ ಮುಖಗಳು ಯಾರು?

ಕೋಟಿ ಕೋಟಿ ಭಕ್ತರ ನಂಬಿಕೆಯ ಕೇಂದ್ರ. ಅನ್ನದಾನ, ಜ್ಞಾನದಾನ, ಅಭಯದಾನಕ್ಕೆ ಹೆಸರಾದ ಪವಿತ್ರ ಕ್ಷೇತ್ರ. ಕರಾವಳಿಯ ಧರ್ಮಭೂಮಿ ಧರ್ಮಸ್ಥಳದ ವಿರುದ್ಧ ಈಗ ಜಾಗತಿಕ ಮಟ್ಟದ ಅಥವಾ ವ್ಯವಸ್ಥಿತವಾದ ಮಹಾಸಂಚು ನಡೆದಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಧರ್ಮಸ್ಥಳದ ಘನತೆಯನ್ನು ಕುಗ್ಗಿಸಲು, ಕ್ಷೇತ್ರದ ಧರ್ಮಾಧಿಕಾರಿಗಳ ತೇಜೋವಧೆ ಮಾಡಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಡೀಲ್ ನಡೆದಿದೆ ಎಂಬ ಗಂಭೀರ ಸುದ್ದಿ ಈಗ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ.

ಹೌದು, ಶ್ರೀಕ್ಷೇತ್ರದ ಬೆಳವಣಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ವಿದೇಶಿ ಫಂಡಿಂಗ್ ನೆರವಿನೊಂದಿಗೆ ಅಥವಾ ಒಳಗೊಳಗೇ ಕೈಜೋಡಿಸಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಜಾಲ ಹೆಣೆದಿವೆ ಎನ್ನಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹರಡುವುದು, ಸೋಷಿಯಲ್ ಮೀಡಿಯಾದಲ್ಲಿ ವ್ಯವಸ್ಥಿತವಾಗಿ ಟ್ರೋಲ್ ಮಾಡುವುದು ಹಾಗೂ ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣಾ ಯೋಜನೆಗಳಿಗೆ ಮುಳ್ಳಾಗಲು ಈ 200 ಕೋಟಿ ರೂಪಾಯಿಗಳ ಬೃಹತ್ ಹಣದ ಹರಿವು ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಈ ಇಡೀ ವಿವಾದದ ಕೇಂದ್ರಬಿಂದುವಾಗಿ ಸದ್ಯ ಕೇಳಿಬರುತ್ತಿರುವುದು ನಟ ಪ್ರಕಾಶ್ ರಾಜ್ ಅವರ ಹೆಸರು. ಸದಾ ತಮ್ಮ ಪ್ರಖರ ಮತ್ತು ವಿವಾದಾತ್ಮಕ ರಾಜಕೀಯ ಹಾಗೂ ಸಾಮಾಜಿಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಕಾಶ್ ರಾಜ್, ಧರ್ಮಸ್ಥಳದ ವಿರುದ್ಧದ ಈ ಸದ್ದಿಲ್ಲದ ಕಾರ್ಯಾಚರಣೆಯ ಹಿಂದಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಕರಾವಳಿ ಭಾಗದಲ್ಲಿ ಸನಾತನ ಧರ್ಮದ ಬೇರುಗಳನ್ನು ಸಡಿಲಗೊಳಿಸಲು ಮತ್ತು ಪ್ರಭಾವಿ ಧಾರ್ಮಿಕ ಸಂಸ್ಥೆಗಳ ಇಮೇಜ್‌ಗೆ ಧಕ್ಕೆ ತರಲು ಕೆಲವು ಶಕ್ತಿಗಳು ಇವರನ್ನು ಬಳಸಿಕೊಳ್ಳುತ್ತಿವೆಯೇ ಅಥವಾ ಇದು ಕೇವಲ ವದಂತಿಯೇ ಎಂಬ ಪ್ರಶ್ನೆ ಸದ್ಯ ಕಾಡ್ತಾ ಇದೆ.

ಸತ್ಯಕ್ಕೆ ಸಾವಿಲ್ಲ, ಧರ್ಮಕ್ಕೆ ಎಂದಿಗೂ ಗ್ಲಾನಿಯಿಲ್ಲ ಎಂಬ ಮಾತಿದೆ. ಧರ್ಮಸ್ಥಳದ ಇತಿಹಾಸದಲ್ಲಿ ಇಂತಹ ನೂರಾರು ಸವಾಲುಗಳು ಎದುರಾಗಿದ್ದರೂ, ಕ್ಷೇತ್ರದ ಮೇಲಿರುವ ಭಕ್ತರ ನಂಬಿಕೆ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಈ 200 ಕೋಟಿ ರೂಪಾಯಿಗಳ ಡೀಲ್ ಸುದ್ದಿ ಕೇವಲ ಅಫಿಡವಿಟ್ಟೋ ಅಥವಾ ಇದರ ಹಿಂದೆ ನಿಜಕ್ಕೂ ದೊಡ್ಡ ಜಾಲವಿದೆಯೋ ಎಂಬುದು ಉನ್ನತ ಮಟ್ಟದ ತನಿಖೆಯಿಂದಷ್ಟೇ ಹೊರಬರಬೇಕಿದೆ. ಅಲ್ಲಿಯವರೆಗೆ ಭಕ್ತ ವಲಯ ಮಾತ್ರ ಈ ಸಂಚಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ.

ನೋಡಿದ್ರಲ್ಲ ವೀಕ್ಷಕರೇ, ಧರ್ಮಸ್ಥಳದ ಹೆಸರನ್ನು ಕೆಡಿಸಲು ನಡೆದಿರುವ ಈ 200 ಕೋಟಿಯ ಡೀಲ್ ಆರೋಪ ನಿಜಕ್ಕೂ ಇಡೀ ಸಮಾಜ ತಲೆತಗ್ಗಿಸುವಂತದ್ದು. ಪವಿತ್ರ ಕ್ಷೇತ್ರಗಳ ತೇಜೋವಧೆ ಮಾಡುವ ಇಂತಹ ಶಕ್ತಿಗಳಿಗೆ ಬ್ರೇಕ್ ಬೀಳುತ್ತಾ? ತನಿಖಾ ಸಂಸ್ಥೆಗಳು ಈ ಕರಾಳ ಸಂಚನ್ನು ಪತ್ತೆ ಹಚ್ಚುತ್ತವಾ ಅನ್ನೋದನ್ನ ಕಾದು ನೋಡಬೇಕಿದೆ.


Share This News