ಹೈಡೋಪೋನಿಕ್ ಗಾಂಜಾ, ಅಕ್ರಮವಾಗಿ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ 28 ವರ್ಷದ ಮಾಡೆಲ್ ಹಾಗೂ ‘ಮಿಸೆಸ್ ಕೇರಳ 2025’ ಸ್ಪರ್ಧೆಯ ವಿಜೇತೆ ಹರ್ಷ ಸನ್ನಿ ಅವರನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಅರೆಷ್ಟ್ ಮಾಡಿದ್ದಾರೆ.
ಬ್ಯಾಂಕಾಕ್‌ನಿಂದ ಭಾರತಕ್ಕೆ ಆಗಮಿಸಿದ್ದ ಹರ್ಷ ಸನ್ನಿ ಅವರ ನಡವಳಿಕೆ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ಗುಪ್ತಚರ ಘಟಕ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಪಾಸಣೆಗೆ ಒಳಪಡಿಸಿದರು. ಏರ್ ಇಂಡಿಯಾ ವಿಮಾನ TG-351 ಮೂಲಕ ಬ್ಯಾಂಕಾಕ್‌ನಿಂದ ಮುಂಬೈಗೆ ಬಂದಿದ್ದ ಹರ್ಷ ಸನ್ನಿ ಅವರ ಟ್ರಾಲಿ ಬ್ಯಾಗ್ ಪರಿಶೀಲನೆ ನಡೆಸಿದಾಗ, 12 ನಿರ್ವಾತ-ಮುಚ್ಚಿದ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಹಸಿರು ಬಣ್ಣದ ವಸ್ತು ಪತ್ತೆಯಾಯಿತು.
ಅಧಿಕಾರಿಗಳು ಎನ್‌ಡಿಪಿಎಸ್ ಪರೀಕ್ಷಾ ಕಿಟ್ ಬಳಸಿ ಸ್ಥಳದಲ್ಲೇ ನಡೆಸಿದ ರಾಸಾಯನಿಕ ಪರೀಕ್ಷೆಯಲ್ಲಿ ಅದು ಉನ್ನತ ಗುಣಮಟ್ಟದ ‘ಹೈಡೋಪೋನಿಕ್ ಗಾಂಜಾ’ ಎಂಬುದು ದೃಢಪಟ್ಟಿದೆ. ಗಾಂಜಾದ ಒಟ್ಟು ತೂಕ 11 ಕೆಜಿಗೂ ಅಧಿಕವಾಗಿದ್ದು, ಅದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು ₹11.82 ಕೋಟಿ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರ್ಷ ಸನ್ನಿ ಅವರನ್ನು ಬಂಧಿಸಲಾಗಿದೆ.
