ಸೂಕ್ತ ಸ್ಥಾನಮಾನ ನೀಡಿ , ಇಲ್ಲವಾದಲ್ಲಿ ಪ್ರಶ್ಚಾತಾಪ ಪಡಬೇಕಾದೀತು – ಸರ್ಕಾರಕ್ಕೆ ಬಂಜಾರ ಸಮುದಾಯ ಎಚ್ಚರಿಕೆ
ವಿಜಯನಗರ ಜಿಲ್ಲೆ ಕೂಡ್ಲಿಗಿ : 2023 ರ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷ , ಜಯಭೇರಿ ಭಾರಿಸಿ ಅಧಿಕಾರ ಪಡೆಯುವಲ್ಲಿ ಬಂಜಾರ ಸಮಾಜ ಪ್ರಮುಖ ಪಾತ್ರ ವಹಿಸಿದೆ. ಅದನ್ನು ಕಾಂಗ್ರೇಸ್ ಪಕ್ಷ ಹಾಗೂ ಪಕ್ಷದ ವರಿಷ್ಠರು ಮರೆಯಬಾರದು , ಮೂರು ವರ್ಷಗಳ ಕಾಲ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯ ರವರು ಇದನ್ನರಿಯಲಿಲ್ಲ. ಸಮಾಜವನ್ನು ಅವರು ಸಂಪೂರ್ಣ ನಿರ್ಲಕ್ಷ್ಯಕ್ಕೀಡು ಮಾಡಿದ್ದಾರೆ , ಡಿ.ಕೆ.ಶಿವಕುಮಾರವರ ಅವದಿಯಲ್ಲಿ ಅದು ಪುನಃ ಜರುಗಬಾರದು ಎಂದು ತಾವು ಈ ಮೂಲಕ ಪಕ್ಷಕ್ಕೆ ಮನವರಿಕೆ ಮಾಡಿಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮೇ 31 ರಂದು ಪಟ್ಟಣದ ಪ್ರವಾಸಿಮಂದಿರದಲ್ಲಿ , ದೂಪದಹಳ್ಳಿ ತಾಂಡಮಠದ ಪ್ರಕಾಶ ಮಹಾರಾಜ ಸ್ವಾಮೀಜಿ ನೇತೃತ್ವದಲ್ಲಿ.
ಬಂಜಾರ ಸಮುದಾಯದ ತಾಲೂಕಾಧ್ಯಕ್ಷರಾದ , ವಾಸುದೇವನಾಯ್ಕರವರ ಮುಂದಾಳತ್ವದಲ್ಲಿ. ಸಮಾಜದ ಪ್ರಮುಖ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು , ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರಕ್ಕೆ ತಮ್ಮ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸೂಕ್ತ ಸ್ಥಾನಮಾನ ನೀಡಿ , ಇಲ್ಲವಾದಲ್ಲಿ ಪ್ರಶ್ಚಾತಾಪ ಪಡಬೇಕಾದೀತು – ಸರ್ಕಾರಕ್ಕೆ ಬಂಜಾರ ಸಮುದಾಯ ಎಚ್ಚರಿಕೆ_ ವಿಜಯನಗರ ಜಿಲ್ಲೆ ಕೂಡ್ಲಿಗಿ : 2023 ರ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷ , ಜಯಭೇರಿ ಭಾರಿಸಿ ಅಧಿಕಾರ ಪಡೆಯುವಲ್ಲಿ ಬಂಜಾರ ಸಮಾಜ ಪ್ರಮುಖ ಪಾತ್ರ ವಹಿಸಿದೆ. ಅದನ್ನು ಕಾಂಗ್ರೇಸ್ ಪಕ್ಷ ಹಾಗೂ ಪಕ್ಷದ ವರಿಷ್ಠರು ಮರೆಯಬಾರದು , ಮೂರು ವರ್ಷಗಳ ಕಾಲ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯ ರವರು ಇದನ್ನರಿಯಲಿಲ್ಲ. ಸಮಾಜವನ್ನು ಅವರು ಸಂಪೂರ್ಣ ನಿರ್ಲಕ್ಷ್ಯಕ್ಕೀಡು ಮಾಡಿದ್ದಾರೆ , ಡಿ.ಕೆ.ಶಿವಕುಮಾರವರ ಅವದಿಯಲ್ಲಿ ಅದು ಪುನಃ ಜರುಗಬಾರದು ಎಂದು ತಾವು ಈ ಮೂಲಕ ಪಕ್ಷಕ್ಕೆ ಮನವರಿಕೆ ಮಾಡಿಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮೇ 31 ರಂದು ಪಟ್ಟಣದ ಪ್ರವಾಸಿಮಂದಿರದಲ್ಲಿ , ದೂಪದಹಳ್ಳಿ ತಾಂಡಮಠದ ಪ್ರಕಾಶ ಮಹಾರಾಜ ಸ್ವಾಮೀಜಿ ನೇತೃತ್ವದಲ್ಲಿ.
ಬಂಜಾರ ಸಮುದಾಯದ ತಾಲೂಕಾಧ್ಯಕ್ಷರಾದ , ವಾಸುದೇವನಾಯ್ಕರವರ ಮುಂದಾಳತ್ವದಲ್ಲಿ. ಸಮಾಜದ ಪ್ರಮುಖ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು ,
ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರಕ್ಕೆ ತಮ್ಮ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಖಂಡರು ಮಾತನಾಡಿ ತಾವು ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಘಂಟೆ ನೀಡುತ್ತಿದ್ದು ನಿರ್ಲಕ್ಷ್ಯ ತೋರಿದ್ದಲ್ಲಿ , ಮುಂಬರುವ ಎಲ್ಲಾ ಚುನಾವಣೆಗಳ ಸಂದರ್ಭದಲ್ಲಿ ಹಿನ್ನಡೆಯಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪಕ್ಷಕ್ಕೆ ಎಚ್ಚರಿಸಿದ್ದಾರೆ.
2023 ರಿಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ , ಸಮುದಾಯಕ್ಕೆ ಯಾವುದೇ ಸೂಕ್ತ ಸ್ಥಾನ ಮಾನ ನೀಡದೆ ನಿರ್ಲಕ್ಷ್ಯ ತೋರಿ ಭಾರೀ ಪ್ರಮಾದ ಎಸಗಿದೆ ಎಂದು ಸಮುದಾಯದ ಪ್ರಮುಖರು ಗಂಭೀರವಾಗಿ ದೂರಿದ್ದಾರೆ.
ಬಂಜಾರ ಸಮುದಾಯ ರಾಜ್ಯದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದು , ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ನಿರ್ಣಾಯಕ ಮತಗಳನ್ನು ಹೊಂದಿರುವ ಪ್ರಮುಖ ಸಮುದಾಯಗಳಲ್ಲಿ ಒಂದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಉಳಿದ ಎರೆಡು ವರ್ಷಗಳಲ್ಲಾದರೂ ತಕ್ಕ ಸ್ಥಾನ ಮಾನ ನೀಡಬೇಕೆಂದು , ತಾವು ಈ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಹಕ್ಕೊತ್ತಾಯ ಮಾಡುತ್ತಿರುವುದಾಗಿ ತಿಳಿಸಿದರು.
ಡಿ.ಕೆ.ಶಿವಕುಮಾರವರು ಮುಖ್ಯಮಂತ್ರಿಗಳಾಗುವ ಎಲ್ಲಾ ಸಾಧ್ಯತೆ ಇದ್ದು , ಕಾಂಗ್ರೆಸ್ ಪಕ್ಷದ ಶಾಸಕರಾದ ಬಂಜಾರ ಸಮುದಾಯದ ರುದ್ರಪ್ಪ ಲಂಬಾಣಿಯವರಿಗೆ , ಮಂತ್ರಿ ಮಂಡಲದಲ್ಲಿ ಮಂತ್ರಿಸ್ಥಾನ ನೀಡಬೇಕಾಗಿದೆ. ಅಥವಾ ಪಕ್ಷದ ಪಿ.ಟಿ.ಪರಮೇಶ್ವರನಾಯ್ಕ ರವರಿಗೆ , ಇಲ್ಲವೇ ಭೀಮಾನಾಯ್ಕರವರಿಗೆ , ಎಂಎಲ್ಸಿ ಮಾಡಬೇಕು ಕ್ಯಾಬಿನೆಟ್ ಮಂತ್ರಿಸ್ಥಾನ ಕಲ್ಲಿಸಿಕೊಡಬೇಕೆಂದು. ತಾವು ಈ ಮೂಲಕ ಪಕ್ಷದ ವರಿಷ್ಠರಿಗೆ , ಹಾಗೂ ಡಿ.ಕೆ.ಶಿವಕುಮಾರವರಿಗೆ ಹಕ್ಕೊತ್ತಾಯ ಮಾಡುವುದಾಗಿ ತಿಳಿಸಿದ್ದಾರೆ.ಈಗಲೂ ನಿರ್ಲಕ್ಷಿಸಿ ಸಮುದಾಯವನ್ನು ಅವಮಾನಿಸಿದ್ದಲ್ಲಿ ,ಮುಂಬರುವ ಎಲ್ಲಾ ಹಂತಗಳ ಚುನಾವಣೆಗಳಲ್ಲಿ. ಮತ್ತು 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ , ರಾಜ್ಯದಲ್ಲಿರುವ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಮುಖಂಡರು ಎಚ್ಚರಿಸಿದ್ದಾರೆ.ಮುಖ್ಯ ಮಂತ್ರಿಗಳಾಗಲಿರುವ , ಡಿ.ಕೆ.ಶಿವಕುಮಾರವರಿಗೆ ತಾವು ಸಮಾಜದ ವತಿಯಿಂದ ಈ ಮೂಲಕ ಅಭಿನಂದಿಸುತ್ತಿದ್ದು.ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ , ಪಕ್ಷ ಬಂಜಾರ ಸಮುದಾಯದವರಿಗೆ ಮಂತ್ರಿಸ್ಥಾನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಬಂಜಾರ ಸಮಾಜದ ಸಂಘಟನೆಯ ಉಪಾಧ್ಯಕ್ಷರಾದ ಎಂ ಎಸ್ ಎಂ ಕೃಷ್ಣ ,
ಸಹಕಾರ್ಯದರ್ಶಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿಗೋವಿಂದ ನಾಯ್ಕ್ , ಖಜಾಂಚಿ ದುರ್ಗಾ ನಾಯ್ಕ್ , ಸದಸ್ಯರುಗಳಾದ ಕೆ.ವೆಂಕಟೇಶ್ ನಾಯ್ಕ್ , ಆರ್ ಸಿ ವಿಜಯಕುಮಾರ್, ವೆಂಕಟೇಶ್, ಶಿವಕುಮಾರ್, ರಾಮ ನಾಯ್ಕ್, ಪವಿತ್ರಬಾಯಿ , ಶ್ರೀ ಸಂತ ಸೇವಾಲಾಲ್ ಬಂಜಾರ (ಲಂಬಾಣಿ) ಅಭಿವೃದ್ಧಿ , ಮತ್ತು ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಸದಸ್ಯರು. ಬಂಜಾರ ಸಮುದಾಯದ ಹಿರಿಯರು ಯುವಕರು ಇತರರು ಉಪಸ್ಥಿತರಿದ್ದರು
ಬಂಜಾರ ಸಮಾಜದ ಸಂಘಟನೆಯ ಉಪಾಧ್ಯಕ್ಷರಾದ ಎಂ ಎಸ್ ಎಂ ಕೃಷ್ಣ ,ಸಹಕಾರ್ಯದರ್ಶಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿಗೋವಿಂದ ನಾಯ್ಕ್ , ಖಜಾಂಚಿ ದುರ್ಗಾ ನಾಯ್ಕ್ , ಸದಸ್ಯರುಗಳಾದ ಕೆ.ವೆಂಕಟೇಶ್ ನಾಯ್ಕ್ , ಆರ್ ಸಿ ವಿಜಯಕುಮಾರ್, ವೆಂಕಟೇಶ್, ಶಿವಕುಮಾರ್, ರಾಮ ನಾಯ್ಕ್, ಪವಿತ್ರಬಾಯಿ , ಶ್ರೀ ಸಂತ ಸೇವಾಲಾಲ್ ಬಂಜಾರ (ಲಂಬಾಣಿ) ಅಭಿವೃದ್ಧಿ , ಮತ್ತು ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಸದಸ್ಯರು. ಬಂಜಾರ ಸಮುದಾಯದ ಹಿರಿಯರು ಯುವಕರು ಇತರರು ಉಪಸ್ಥಿತರಿದ್ದರು
