Share This News

ಪ್ರೀಯ ವಿಕ್ಷಕರೇ ಸೆಂಚುರಿ ಟಿವಿಗೆ ಸ್ವಾಗತ, ಇವತ್ತು ನಾನು ನಿಮ್ಮ ಮುಂದೆ ವಿಶೇಷ ಸ್ಟೋರಿಯನ್ನು ವಿವರಿಸುತ್ತೇನೆ, ಎನಪ್ಪಾ ? ಆ ಸ್ಟೋರಿ ಎನ್ನುತ್ತೀರಾ ಇಲ್ಲಿದೆ ನೋಡಿ …. ಹೌದು ಮದ್ಯ ಪ್ರಿಯರಿಗೆ ಬಾರ್ ಜಾಗ ಸ್ವರ್ಗಕ್ಕಿಂತ ಕಮ್ಮಿ ಏನಲ್ಲ. ಕುಡಿಯುವದು ಕೆಲವೊಬ್ಬರಿಗೆ ಚಟವಾದ್ರೆ ಇನ್ನು ಕೆಲವರಿಗೆ ಪ್ಯಾಶನ್ ಆಗಿದೆ. ಆದ್ರೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಈ ವಿಚಾರ ಕುಡಿಯದೆ ಇರುವ ಯುವ ಪೀಳಿಗೆಗೆ ಮಾತ್ರ ಸೀಮಿತವಾಗಿದೆ. ಏನಪ್ಪಾ ಇವರು ಈಗ ಹೇಳುತ್ತಾರೆ, ಅಂತೀರಾ? ಹೌದು ನನ್ನ ನೆಚ್ಚಿನ ವೀಕ್ಷಕರೆ… ಈ ಡಿಜಿಟಲ್ ಯುಗದಲ್ಲಿ, ಕೆಲ ಯವಕರಿಗೆ ಕೆಲಸ ಸಿಗುವುದು ಕಷ್ಟವಾಗಿದೆ, ಒಂದು ವೇಳೆ ಕೆಲಸ ಸಿಕ್ಕರೂ, ಅದರಲ್ಲಿರುವ ಒತ್ತಡ ಕಡಿಮೆಯಾಗಲು ಸರಾಯಿಯ ಮಡಿಲಲ್ಲಿ ಸೆರೆಯಾಗುತ್ತಾರೆ. ಸರಾಯಿಯಿಂದಲೇ ನಮಗೆ ಸಮಾಧಾನ ಸಿಗುತ್ತದೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ನೋಡುದಾದ್ರೆ ಸರಾಯಿಂದ ಎಷ್ಟೋ ಸಂಸಾರಗಳು ನೆಲೆ ಇಲ್ಲದೆ, ನೆಮ್ಮದಿ ಇಲ್ಲದೆ ಒದ್ದಾಡುತ್ತಿದೆ. ಇದೆಲ್ಲಾ ಈಗ ಯಾಕಪ್ಪಾ ಅಂತೀರಾ?  ಒಂದು ಸಾರಿ ಇತ್ತ ಕೇಳಿ…

ರಾಜ್ಯದಲ್ಲಿ ಆಲ್ಕೋಹಾಲ್ ಇನ್ ಬೇವರೇಜ್ (ಎಐಬಿ) ಆಧಾರಿತ ತೆರಿಗೆ ಪದ್ಧತಿ ಜಾರಿಯಿಂದ ಹಲವು ಮದ್ಯ, ಬಿಯರ್‌ಗಳ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಈ ವಿಚಾರ ಮದ್ಯ ಪ್ರೀಯರಿಗೆ ಗುಡ್ ನ್ಯೂಸ್ ಎಂದು ಭಾವಿಸಿದ್ದರು ಆದರೆ, ಬಹುತೇಕ ಮದ್ಯದಂಗಡಿಯವರು ಈ ಬ್ರಾಂಡ್‌ಗಳ ಬೆಲೆ ಕಡಿಮೆ ಮಾಡದೇ ಗ್ರಾಹಕರಿಗೆ ಟೋಪಿ ಹಾಕುತ್ತಿದ್ದಾರೆ. ಹಲವು ದಶಕಗಳಿಂದ ರಾಜ್ಯದಲ್ಲಿ ಬಲ್ಕ್ ಲೀಟರ್ ಆಧರಿತ ತೆರಿಗೆ ಪದ್ಧತಿ ಇದ್ದು ಇದೇ ಮೊದಲ ಬಾರಿಗೆ ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಮೇ ೧೧ ರಿಂದ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿದ ಎಐಬಿ ತೆರಿಗೆ ಪದ್ಧತಿ ಜಾರಿಯಾಗಿದೆ. ಇದರಿಂದಾಗಿ ಬಿಯರ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ವಿಸ್ಕಿ, ರಮ್ ಮತ್ತಿತರ ಹಲವು ದೇಶಿಯ ಮದ್ಯಗಳ ದರವೂ ಕಡಿಮೆಯಾಗಿದೆ. ಆದರೆ ಇದರ ಲಾಭ ಗ್ರಾಹರಿಗೆ ವರ್ಗವಾಗುತ್ತಿಲ್ಲ.

ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, ನಮ್ಮಲ್ಲಿ ಹಳೆಯ ಸ್ಟಾಕ್ ಇದೆ. ಆದ್ದರಿಂದ ಕಡಿಮೆ ಬೆಲೆಗೆ ನೀಡುವುದಿಲ್ಲ ಎಂದುಹೇಳುತ್ತಿದ್ದಾರೆ. ಬೆಲೆ ಇಳಿಕೆಯಾಗಿದ್ದರೂ ಬಾಟಲ್ ಮೇಲಿನ ಲೇಬಲ್‌ಗಳಲ್ಲಿ ಇನ್ನೂ ಹೊಸ ದರ ನಮೂದಾಗಿಲ್ಲ ಆದರೆ, ಮದ್ಯಪ್ರಿಯರಿಗೆ ಇದ್ಯಾವುದರ ಅರಿವಿಲ್ಲದಿರುವುದರಿಂದ ಬಹುತೇಕ ಮದ್ಯದಂಗಡಿಗಳಲ್ಲಿ ಬಾಟಲ್‌ಗಳ ಮೇಲಿನ ಹಳೆಯ ದರವನ್ನೇ ತೋರಿಸಿ ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಮತ್ತೊಂದೆಡೆ, ಬೆಲೆ ಹೆಚ್ಚಳವಾದ ಮದ್ಯದ ಬ್ರ‍್ಯಾಂಡ್ ಅಧಿಕ ಬೆಲೆಗೆ ಮಾರುವುದನ್ನು ಮಾತ್ರ ಮದ್ಯದಂಗಡಿಯವರು ಮರೆಯುತ್ತಿಲ್ಲ. ಸಿಎಲ್-೨ (ಎಂಆರ್‌ಪಿ ಔಟ್‌ಲೆಟ್), ಸಿಎಲ್- ೧೧ಸಿ (ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ) ಗಳಲ್ಲಿ ನೂತನ ನೀತಿಯಂತೆ ಬಿಯರ್‌ಗಳಿಗೆ ಕಡಿಮೆ ದರ ಪಡೆಯಲೇಬೇಕು. ಇಲ್ಲದಿದ್ದರೆ ಇಂಥ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ  ನಾಗರಾಜಪ್ಪ ಎಚ್ಚರಿಕೆ ನೀಡಿದ್ದಾರೆ.

ನೋಡಿದ್ರೆಲ್ಲಾ ವಿಕ್ಷಕರೆ ಸರಾಯಿ ಸಮಾಜಕ್ಕೆ ಮಾದರಿಯೋ, ಮಾರಿಯೋ, ಅರ್ಥವಾಗದಂತ ಸನ್ನಿವೇಶ ಎದುರಾಗಿದೆ. ಕಾರಣ ಕುಡಿತದಿಂದ ಕೆಲ ಮಸ್ಥಿತಿಗಳು ಹೀನಾಯವಾಗಿ, ಕುಟುಂಬಕ್ಕೆ ಕಿರಿ ಕಿರಿ ಮಾಡುತ್ತಿವೆ. ಮತ್ತೊಂದು ಕಡೆ ಸರಾಯಿ ಬೆಲೆ ಕಡಿಮೆ ಮಾಡಿದ್ದಾರೆ. ಇದರ ಪರಿಣಾಮ ಸಮಾಜದ ಮೇಲೆ ಯಾವ ರೀತಿ ಮೂಡಲಿದೆ ಎನ್ನವುದು ಕಾದು ನೋಡಬೇಕಿದೆ.. 


Share This News