ಮಂಡ್ಯ : ಜಿಲ್ಲೆಯಲ್ಲಿ ಅತ್ಯಂತ ದುರದೃಷ್ಟಕರ ಹಾಗೂ ಕರುಳು ಹಿಂಡುವ ಘಟನೆಯೊಂದು ಸಂಭವಿಸಿದೆ. ಆಟವಾಡುತ್ತಿದ್ದ ಎರಡು ವರ್ಷದ ಕಂದಮ್ಮನೊಂದು ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿರುವ ಧೋರಣ ಘಟನೆ ಪಾಂಡವಪುರ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ದುರ್ದೈವಿ ಬಾಲಕನನ್ನು ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಹರೀಶ್ ಮತ್ತು ಸುಷ್ಮಾ ದಂಪತಿಯ ಪುತ್ರ ವಿನು (2 ವರ್ಷ) ಎಂದು ಗುರುತಿಸಲಾಗಿದೆ.
ಶನಿವಾರ ಬಾಲಕ ವಿನು ಎಂದಿನಂತೆ ತನ್ನ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಮನೆಯ ಮುಂದಿದ್ದ ನೀರಿನ ಸಂಪ್‌ನ ಮುಚ್ಚಳ ಸರಿಯಾಗಿ ಮುಚ್ಚದ ಕಾರಣ ಅಥವಾ ಆಕಸ್ಮಿಕವಾಗಿ ಮಗು ಅದರ ಬಳಿ ಹೋದಾಗ ಕಾಲು ಜಾರಿ ಒಳಗೆ ಬಿದ್ದಿದೆ ಎನ್ನಲಾಗಿದೆ. ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಾಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ.
