Share This News

ತಿರುಮಲ: ವೆಂಕಟೇಶ್ವರ ಸ್ವಾಮಿಯ ಪರಮ ಪವಿತ್ರ ಪ್ರಸಾದವಾದ ‘ತಿರುಮಲಲಡ್ಡು’ ಇದೀಗ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರ ಪಾಲಿಗೆ ಕೇವಲ ಪ್ರಸಾದವಾಗಿರದೆ, ಮಹಾ ದೈವಿಕ ಶಕ್ತಿಯ ಸಂಕೇತವಾಗಿರುವ ಶ್ರೀವಾರಿ ಲಡ್ಡು ಮಾರಾಟವು ಈ ವರ್ಷದ (2026) ಮೇ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕೃತವಾಗಿ ಘೋಷಿಸಿದೆ

ಟಿಟಿಡಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2024 ರ ಮೇ ತಿಂಗಳಲ್ಲಿ 1.01 ಕೋಟಿ ಮತ್ತು 2025 ರ ಮೇ ತಿಂಗಳಲ್ಲಿ 1.10 ಕೋಟಿ ಲಡ್ಡುಗಳು ಮಾರಾಟವಾಗಿದ್ದವು. ಆದರೆ ಈ ವರ್ಷದ ಮೇ ತಿಂಗಳೊಂದರಲ್ಲೇ ಬರೋಬ್ಬರಿ 1,21,35,528 (1.21 ಕೋಟಿಗೂ ಹೆಚ್ಚು) ಲಡ್ಡುಗಳು ಮಾರಾಟವಾಗುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ.


Share This News