
ಮಾಜಿ ಸಚಿವರ ಪೈಕಿ 16 ಮಂದಿಗೆ ಸಚಿವ ಸ್ಥಾನ
ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಮಾಜಿ ಸಚಿವರ ಪೈಕಿ 16 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದ್ದು, 13 ಮಂದಿ ಮತ್ತೆ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್, ಶಿವರಾಜ್ ತಂಗಡಗಿ, ಕೆ.ಹೆಚ್. ಮುನಿಯಪ್ಪ, ಮಂಕಾಳ್ ವೈದ್ಯ, ಸಂತೋಷ್ ಲಾಲ್ ಮತ್ತು ದಿನೇಶ್ ಗುಂಡುರಾವ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಸಮುದಾಯದ ಶಾಸಕರ ಬೆಂಬಲ ಪಡೆಯಲು ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ಲಿಂಗಾಯತ ಶಾಸಕರ ಜೊತೆಗೆ ಈಶ್ವರ್ ಖಂಡ್ರೆ ಅವರು ಭೋಜನಕೂಟ ಆಯೋಜಿಸಿ ಡಿಸಿಎಂ ಸ್ಥಾನಕ್ಕೆ ಬೆಂಬಲ ಕೋರಿದ್ದಾರೆ. ಎಂ.ಬಿ. ಪಾಟೀಲ್ ಸಹ ಇದೇ ರೀತಿ ಲಿಂಗಾಯತ ಶಾಸಕರನ್ನು ಸಂಪರ್ಕಿಸಿ ತಮ್ಮ ಪರ ಲಾಬಿ ನಡೆಸುತ್ತಿದ್ದಾರೆ.
ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳ ಸೃಷ್ಟಿಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ತೀವ್ರಗೊಂಡಿದ್ದು, ಡಿಸಿಎಂ ಸ್ಥಾನ ಪಡೆಯಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಶುರುವಾಗಿದೆ.
