ಸಂತಾನ ಭಾಗ್ಯವನ್ನು ಕರುಣಿಸುವ ವಿಶ್ವದ ಏಕೈಕ ಅಂಬೆಗಾಲು ಕೃಷ್ಣ ದೇವಾಲಯ ಎಲ್ಲಿದೆ ಗೊತ್ತಾ..? ಈ ಆಲಯದಲ್ಲಿಯೇ ಪುರಂದರ ದಾಸರು “ಆಡಿಸಿದಳೆಶೋಧೆ ಜಗದೋದ್ಧಾರನ” ಕೀರ್ತನೆ ರಚಿಸಿದರು. ಮಕ್ಕಳಿಲ್ಲದವರು ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಬರುತ್ತಾರೆ.ಹಾಗಾದರೆ ಆ ಆಲಯ ಯಾವುದು ಎಂಬುದನ್ನು ಇಲ್ಲಿ ತಿಳಿಯಿರಿ:
ಹೈಲೈಟ್ಸ್:
ಪ್ರಪಂಚದ ಏಕೈಕ ಅಂಬೆಗಾಲು ಕೃಷ್ಣನ ಆಲಯ ಸಂತಾನ ಭಾಗ್ಯ ಕರುಣಿಸುವ ಬೆಣ್ಣೆ ಕೃಷ್ಣ ಈ ಅಂಬೆಗಾಲು ಕೃಷ್ಣನ ಆಲಯವು ಬೆಂಗಳೂರಿನಿಂದ 60 ಕಿ.ಮೀ ದೂರವಿದೆ. ಈ ದೇವಾಲಯದಲ್ಲಿ ಪುರಂದರ ದಾಸರು “ಆಡಿಸಿದಳೆಶೋಧೆ ಜಗದೋದ್ಧಾರನ” ಕೀರ್ತನೆ ರಚಿಸಿದರು.
ಮಕ್ಕಳು ಸಂತೋಷದ ಸಂಕೇತವಾಗಿದ್ದಾರೆ. ಪ್ರಪಂಚದಲ್ಲಿ ಮಕ್ಕಳು ಪಡೆಯಲಾಗದ ಸಾಕಷ್ಟು ದಂಪತಿಗಳು ಇದ್ದಾರೆ.ಅವರು ತಮ್ಮ ಜೀವನದಲ್ಲಿ ಖುಷಿ ಪಡಿಸಲು ಒಂದು ಜೀವ ಇಲ್ಲ ಎಂದು ಮರುಗುವುದುಂಟು. ಹಿಂದೂ ಧರ್ಮದ ಪ್ರಕಾರ, ಅಂಬೆಗಾಲಿನ ಕೃಷ್ಣನನ್ನು ಪೂಜೆ ಮಾಡುವುದರಿಂದ ಸಂತಾನವಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.
ಇದಕ್ಕಾಗಿ ಮಕ್ಕಳಿಲ್ಲದ ದಂಪತಿಗಳು ಅಂಬೆಗಾಲಿನ ಕೃಷ್ಣನನ್ನು ಆರಾಧಿಸುತ್ತಾರೆ. ಈ ರೂಪದಲ್ಲಿ ಅವನನ್ನು ಪೂಜಿಸುವುದರಿಂದ ಸಂತೋಷ, ಮುಗ್ಧತೆ, ನಗುವನ್ನು ಪ್ರತಿನಿಧಿಸುತ್ತಾನೆ ಎನ್ನಲಾಗಿದೆ.ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಸಾಕಷ್ಟು ದೇವಾಲಯಗಳಿವೆ. ಆದರೆ ಅವನ ಬಾಲ್ಯವನ್ನು ನೆನಪಿಸುವ ಮತ್ತು ನಾಲ್ಕು ಕಾಲುಗಳಿಂದ ತೆವಳುತ್ತಾ ಬರುವ ಭಂಗಿಯಲ್ಲಿ ದರ್ಶನ ನೀಡುವ ಏಕೈಕ ದೇವಾಲಯವಿರುವುದು ನಮ್ಮ ಕರ್ನಾಟಕದಲ್ಲಿ ಮಾತ್ರ! ವಾಸ್ತವವಾಗಿ, ಜಗತ್ತಿನಲ್ಲಿಯೇ ಅಂತಹ ಏಕೈಕ ಶ್ರೀಕೃಷ್ಣನ ದೇವಾಲಯವಿರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ. ಈ ಕಾರಣದಿಂದಲೇ ವಿವಾಹವಾಗಿ ಅದೆಷ್ಟೋ ವರ್ಷಗಳು ಕಳೆದರೂ ಸಂತಾನ ಭಾಗ್ಯವಿಲ್ಲದ ದಂಪತಿಗಳು ಈ ಕೃಷ್ಣನ ಆಲಯಕ್ಕೆ ಭೇಟಿ ನೀಡುತ್ತಾರೆ. ಅವನಿಗೆ ಸಂಪ್ರೀತಗೊಳಿಸಲು ಹಾಲು, ಬೆಣ್ಣೆ, ತುಪ್ಪಗಳಿಂದ ನೈವೇದ್ಯ ಅರ್ಪಿಸಿ ಭಕ್ತಿಯಿಂದ ಪೂಜಿಸುತ್ತಾರೆ.ಅಷ್ಟಕ್ಕೂ ಈ ಅಂಬೆಗಾಲು ಕೃಷ್ಣ ದೇವಾಲಯ ಎಲ್ಲಿದೆ ಎಂದು ನೀವು ಯೋಚಿಸುತ್ತಿರಬಹುದು. ಈ ಆಲಯವು ರಾಮನಗರ ಜಿಲ್ಲೆಯ ದೊಡ್ಡಮಳೂರು ಗ್ರಾಮದಲ್ಲಿದೆ. ಇಲ್ಲಿ ಶ್ರೀಕೃಷ್ಣನು ತೆವಳುವ ಭಂಗಿಯಲ್ಲಿದ್ದು, ಒಂದು ಕೈಯಲ್ಲಿ ಬೆಣ್ಣೆಯನ್ನು ಹಿಡಿದು ಅಂಬೆಗಾಲಿಡುತ್ತಿರುವ ರೀತಿ ದರ್ಶನ ನೀಡುತ್ತಾರೆ. ಇಂತಹ ಶ್ರೀಕೃಷ್ಣನ ವಿಗ್ರಹವಿರುವ ಪ್ರಪಂಚದ ಏಕೈಕ ದೇವಸ್ಥಾನ ಇದಾಗಿದೆ. ಅಂದಹಾಗೆ, ಈ ಆಲಯಕ್ಕೆ ಹೋಗವುದು ಬಹಳ ಸುಲಭ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ಈ ದೈವಿಕ ಆಲಯವಿದೆ.
