New Delhi: ಇಂದಿನ Mann Ki Baat (127ನೇ ಸಂಪುಟ – 26 ಅಕ್ಟೋಬರ್ 2025)-ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಕಾಫಿಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಮಾತುಗಳಲ್ಲಿ ಕೇವಲ ಕಾಫಿಯ ಸುವಾಸನೆಯಷ್ಟೇ ಅಲ್ಲ, ಕರ್ನಾಟಕದ ರೈತರು ಮತ್ತು ಕಾಫಿ ಬೆಳೆಯುವವರ ಶ್ರಮದ ಘಮವೂ ತುಂಬಿತ್ತು.

“ಇಂದು ಭಾರತೀಯ ಕಾಫಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಯಶಸ್ಸಿಗೆ ಕಾರಣವಾದ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖವಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ – ಈ ಪ್ರದೇಶಗಳ ಕಾಫಿಗೆ ವಿಶ್ವದಾದ್ಯಂತ ಬೇಡಿಕೆ ಇದೆ.”

ಅವರು ಕೇವಲ ಕಾಫಿಯ ರುಚಿಯ ಬಗ್ಗೆ ಮಾತ್ರವಲ್ಲ, ಅದರ ಹಿಂದಿರುವ ಸಂಸ್ಕೃತಿ, ಪರಿಸರ ಮತ್ತು ರೈತರ ಶ್ರಮದ ಬಗ್ಗೆ ಮಾತನಾಡಿದರು. ಕರ್ನಾಟಕದ ಕಾಫಿ ಕೇವಲ ಪಾನೀಯವಲ್ಲ, ಅದು ನಮ್ಮ ಮಣ್ಣಿನ ಪರಿಮಳ, ಶ್ರಮದ ಫಲ, ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂಬುದನ್ನು ಅವರು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದರು.

 ರೈತರ ಶ್ರಮಕ್ಕೆ ಗೌರವ

ಈ ಮೆಚ್ಚುಗೆ ಕೇವಲ ಒಂದು ಭಾಷಣವಲ್ಲ, ಅದು ಸಾವಿರಾರು ಕಾಫಿ ಬೆಳೆಗಾರರಿಗೆ ಪ್ರೇರಣೆಯಾಗಿದೆ. ಪ್ರಧಾನಮಂತ್ರಿಯ ಮಾತುಗಳು ರೈತರ ಶ್ರಮಕ್ಕೆ ಗೌರವ ನೀಡಿದಂತಾಗಿದೆ. ಈ ರೀತಿಯ ಮಾನ್ಯತೆಗಳು ನಮ್ಮ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತವೆ. ಈ ಮಾತು ಕೇಳಿದ ನಂತರ ಒಂದು ಕಾಫಿ ಕಪ್ ಹಿಡಿದು, ಕೊಡಗಿನ ಮಳೆಯ ನೆನೆಪುಗಳೊಂದಿಗೆ ಕುಳಿತುಕೊಳ್ಳಬೇಕೆನಿಸುತ್ತೆ, ಅಲ್ಲವಾ?

“ಮನ ಕಿ ಬಾತ್” ಕಾರ್ಯಕ್ರಮದ ಹೈಲೈಟ್ಸ್:-

ಛಠ್ ಪೂಜಾ ಹಬ್ಬದ ಶುಭಾಶಯಗಳು: ಛಠ್ ಪೂಜಾ ಹಬ್ಬವು ಭಕ್ತಿಯ, ಪರಂಪರೆಯ ಮತ್ತು ಸಾಮಾಜಿಕ ಏಕತೆಯ ಸಂಕೇತವಾಗಿದೆ ಎಂದು ಅವರು ಹೇಳಿದರು. ಈ ಹಬ್ಬವು ದೇಶದ ಎಲ್ಲ ವರ್ಗದ ಜನರನ್ನು ಒಂದೇ ತಟದಲ್ಲಿ ಸೇರಿಸುವ ಶಕ್ತಿ ಹೊಂದಿದೆ ಎಂದರು.

ವಂದೆ ಮಾತರಂಗೆ 150 ವರ್ಷ: ಪ್ರಧಾನಮಂತ್ರಿ ಅವರು ವಂದೆ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವವನ್ನು ಸ್ಮರಿಸಿದರು. ಅವರು ಈ ಗೀತೆಯು ಭಾರತದ ವೈಭವವನ್ನು ಪ್ರತಿಬಿಂಬಿಸುವುದಾಗಿ ಹೇಳಿದರು ಮತ್ತು ಮುಂದಿನ ಪೀಳಿಗೆಗೆ ಅದರ ಮೌಲ್ಯಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದರು.

GST ಬಚತ್ ಉತ್ಸವ: ಹಬ್ಬದ ಕಾಲದಲ್ಲಿ ದೇಶದ ಮಾರುಕಟ್ಟೆಗಳಲ್ಲಿ ಸ್ವದೇಶಿ ಉತ್ಪನ್ನಗಳ ಖರೀದಿಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ಜನರ ಉತ್ಸಾಹ ಮತ್ತು ದೇಶಪ್ರೇಮವನ್ನು ತೋರಿಸುತ್ತದೆ ಎಂದರು.

• ಪರಿಸರ ಸಂರಕ್ಷಣೆಗಾಗಿ ಮಾಡಿದ ಕಾರ್ಯಗಳಿಗೆ ಗಮನ: Save Trees ಬೆಂಗಳೂರು ಕುರಿತ Lake/Wells ಪುನರುಜ್ಜೀವನವ ಅಭಿವೃದ್ಧಿ , ઘોડેરા કચ્છ (ಗುಜರಾತ್) ಸೇರಿದಂತೆ ಮ್ಯಾಂಗ್ರೋವ್ ಬೆಳೆಗಳು ಮತ್ತು ಪ್ರಾಣಿಕಜೀವಿ ವೃದ್ಧಿ ಇತ್ಯಾದಿ.