“10/11 ಟೆರರ್” ಎಂಬ ಹೆಸರಿನಲ್ಲಿ ಗುರುತಿಸಲಾದ ವೈಟ್ ಕಾಲರ್ ಭಯೋತ್ಪಾದನೆಯ ಪ್ರಕರಣವು, ಶಿಕ್ಷಣ ಹೊಂದಿದ ವ್ಯಕ್ತಿಗಳಿಂದ ನಡೆದ ಭಯೋತ್ಪಾದಕ ಕೃತ್ಯಗಳ ಗಂಭೀರತೆಯನ್ನು ಬೆಳಕಿಗೆ ತಂದಿದೆ.
ವೈಟ್ ಕಾಲರ್ ಭಯೋತ್ಪಾದನೆ ಎಂದರೇನು?
- ವೈಟ್ ಕಾಲರ್ ಭಯೋತ್ಪಾದನೆ ಎಂದರೆ ಶಿಕ್ಷಣ ಹೊಂದಿದ, ಸಾಮಾನ್ಯವಾಗಿ ಗೌರವದ ವೃತ್ತಿಗಳಲ್ಲಿರುವ ವ್ಯಕ್ತಿಗಳು (ವೈದ್ಯರು, ಎಂಜಿನಿಯರ್ಗಳು, ಅಕೌಂಟೆಂಟ್ಗಳು) ದೇಶದ ವಿರುದ್ಧ ಉಗ್ರ ಕೃತ್ಯಗಳಲ್ಲಿ ತೊಡಗುವುದು.
- ಈ ಕೃತ್ಯಗಳು ತಂತ್ರಜ್ಞಾನ, ಜಾಲತಂತ್ರ, ಹಣಕಾಸು ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತವೆ.
“10/11 ಟೆರರ್” ಪ್ರಕರಣದ ಹಿನ್ನೆಲೆ
- 2025ರ ನವೆಂಬರ್ 10ರಂದು, ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
- ಸ್ಫೋಟಕಗಳನ್ನು ಸ್ಥಳಾಂತರಿಸುವ ವೇಳೆ, ಆಕಸ್ಮಿಕವಾಗಿ ಕಾರು ಸ್ಫೋಟಗೊಂಡಿದ್ದು, ತನಿಖೆ ಆರಂಭವಾಗಿದೆ.
- ಪೊಲೀಸರು ರೇಡ್ ಮಾಡುವ ಭಯದಿಂದ ಸ್ಫೋಟಕ ಬೇರೆಡೆ ಸ್ಥಳಾಂತರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ದಾರಿ ಮಧ್ಯ ಕಾರು ಸ್ಫೋಟಗೊಂಡಿದೆ ಎಂಬ ಆಯಾಮದಲ್ಲಿ ತನಿಖೆ
- ಬಂಧಿತರು ವೈದ್ಯರು ಎಂಬುದು ಆತಂಕಕಾರಿ ಸಂಗತಿ. ಈ ಹಿಂದೆ ಎಂಜಿನಿಯರ್ಗಳು ಕೂಡ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವುದು ದಾಖಲಾಗಿದೆ
ತನಿಖೆಯ ಪ್ರಮುಖ ಅಂಶಗಳು
- 126 ಕೃತ್ಯಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
- ಗಡಿಯಾಚೆಗಿನ ಶಕ್ತಿಗಳೊಂದಿಗೆ ಬಂಧಿತರು ಸಂಪರ್ಕದಲ್ಲಿದ್ದರೆಂಬ ಶಂಕೆ.
- ಸ್ಫೋಟಕಗಳನ್ನು ಬೇರೆಡೆ ಸ್ಥಳಾಂತರಿಸುವ ಯೋಜನೆಗಳು ಇದ್ದವು.
- ಪೊಲೀಸರು ರೇಡ್ ಮಾಡುವ ಭಯದಿಂದ ಸ್ಥಳ ಬದಲಾವಣೆ ನಡೆಯುತ್ತಿತ್ತು.
ಆರ್ಡಿಎಕ್ಸ್ ಅಲ್ಲ ಅಮೋನಿಯಂ ನೈಟ್ರೇಟ್
ದುರ್ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ತೆಗೆದ ವಿಡಿಯೊವೊಂದರಲ್ಲಿ ಬೆಂಕಿ ಹತ್ತಿಕೊಂಡ ಕಾರಿನಿಂದ ಕಿತ್ತಳೆ ಬಣ್ಣದ ಹೊಗೆ ಬರುತ್ತಿರುವುದು ಕಂಡು ಬಂದಿದೆ. ಆರೇಂಜ್ ಬಣ್ಣದ ಹೊಗೆ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಾಗ ಹೊರಸೂಸಲ್ಪಡುತ್ತದೆ ಎಂದು ಪರಿಣತರು ಹೇಳಿದ್ದಾರೆ. ಅಮೋನಿಯಂ ನೈಟ್ರೇಟ್ ಹೊತ್ತಿ ಉರಿಯುವಾಗ ನೈಟ್ರೋಜನ್ ಆಕ್ಸೈಡ್ ಮತ್ತು ಅಮೋನಿಯ ವಾತಾವಾರಣಕ್ಕೆ ಬಿಡುಗಡೆಯಾಗುತ್ತದೆ. ಆಗ ಹೊರಸೂಸುವ ಹೊಗೆ ಕಿತ್ತಳೆ ಬಣ್ಣವನು ಹೊಂದಿರುತ್ತದೆ. ಇದರಿಂದಾಗಿ ಸ್ಫೋಟದಲ್ಲಿ ಬಳಕೆಯಾಗಿದ್ದು ಆರ್ಡಿಎಕ್ಸ್ ಅಲ್ಲ ಅಮೋನಿಯಂ ನೈಟ್ರೇಟ್ ಎನ್ನುವ ಬಲವಾದ ಶಂಕೆ ಮೂಡಿದೆ.
ಸಮಾಜದ ಮೇಲೆ ಪರಿಣಾಮ
- ವೈದ್ಯರು, ಎಂಜಿನಿಯರ್ಗಳು, ಅಕೌಂಟೆಂಟ್ಗಳು ಮುಂತಾದವರು ಜನಸಾಮಾನ್ಯರ ಕನಸು ಮತ್ತು ಗೌರವದ ಸಂಕೇತ. ಇವರು ದೇಶದ ವಿರುದ್ಧ ಕೃತ್ಯಗಳಲ್ಲಿ ತೊಡಗುವುದು ಸಾಮಾಜಿಕ ನಂಬಿಕೆಗೆ ಧಕ್ಕಿ ನೀಡುತ್ತದೆ.
- ಪೊಲೀಸರು ರೇಡ್ ಮಾಡುವ ಭಯದಿಂದ ಸ್ಫೋಟಕ ಬೇರೆಡೆ ಸ್ಥಳಾಂತರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ದಾರಿ ಮಧ್ಯ ಕಾರು ಸ್ಫೋಟಗೊಂಡಿದೆ ಎಂಬ ಆಯಾಮದಲ್ಲಿ ತನಿಖೆ.
- ಈ ಪ್ರಕರಣವು ಶಿಕ್ಷಿತ ವರ್ಗದ ಭದ್ರತೆ ಮತ್ತು ಪಾರದರ್ಶಕತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
