Share This News

ಪುಟ್ಟ ಬಾಲಕಿಯೊಬ್ಬಳು ಸಾಧನೆ ಮಾಡಿರುವ ಸುದ್ದಿ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಬಾಲಕಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಹೌದು ಸಂಗೀತ ,ಸಿದ್ದು ಕೇಸಾಪುರ ಅವ್ರ ಪುತ್ರಿ ಸಾಹಸ್ರ, ಎಸ್ ಕೇಸಾಪುರ ಎನ್ನುವ ಬಾಲಕಿ ಅತಿ ಚಿಕ್ಕ ವಯಸ್ಸಿನಲ್ಲೇ ತನ್ನ ಅಸಾಧಾರಣ ಗ್ರಹಿಕೆ ಶಕ್ತಿ, ನೆನಪಿನ ಸಾಮರ್ಥ್ಯ ಮತ್ತು ಕಲಿಕೆಯ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಪ್ರಾಣಿಗಳು, ಹಕ್ಕಿಗಳು, ಹಣ್ಣುಗಳು, ತರಕಾರಿಗಳು, ಬಣ್ಣಗಳು, ಆಕಾರಗಳು, ದೇಹದ ಅಂಗಗಳು, ಸಂಖ್ಯೆಗಳು, ವಾರದ ದಿನಗಳು, ತಿಂಗಳುಗಳು ಹಾಗೂ ಇನ್ನೂ ಅನೇಕ ವಿಷಯಗಳನ್ನು ಗುರುತಿಸಿ ಹೇಳುವ ಮೂಲಕ ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಈ ಅಪರೂಪದ ಸಾಧನೆಯನ್ನು ಗುರುತಿಸಿ Kalams World Records ಸಂಸ್ಥೆಯು ವಿಶ್ವ ದಾಖಲೆ ಗೌರವವನ್ನು ನೀಡಿ ಸನ್ಮಾನಿಸಿದೆ.

ಗ್ರಾಮೀಣ ಹಿನ್ನೆಲೆಯಿಂದ ಬಂದ ಕುಟುಂಬಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಮಗಳ ಸಾಧನೆ ಕರ್ನಾಟಕದ ಪ್ರತಿಯೊಬ್ಬ ಪೋಷಕರಿಗೂ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.ಇಂದು ನಮ್ಮ ಮಗಳ ಹೆಸರು ವಿಶ್ವ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ; ನಾಳೆ ಭಾರತದ ಹೆಮ್ಮೆಯಾಗಿ ವಿಶ್ವದಾದ್ಯಂತ ಗುರುತಿಸಿಕೊಳ್ಳಲಿ ಎಂಬುದು ನಮ್ಮ ಕನಸು.”
ನಮ್ಮ ಮಗಳಿಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಈ ಮಗುವಿನ ತಂದೆ ತಾಯಿ ಸಂತೋಷ ವ್ಯಕ್ತಪಡಿಸಿದ್ದಾರೆ ..


Share This News