Share This News

ರಾಜ್ಯದ ರಾಜಕೀಯದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ. ಒಂದು ಕಡೆ ಸಿಎಂ ಕುರ್ಚಿ ಕದನವಾದ್ರೆ ಮತ್ತೊಂದು ಕಡೆ ಬಿಜೆಪಿ-ಕಾಂಗ್ರೇಸ್-ಜೆಡಿಎಸ್ ಇತರೆ ಪಕ್ಷಗಳು ಸೇರಿ ಒಬ್ಬರ ಮೇಲೆ ಒಬ್ಬರು ಪರ- ವಿರೋಧ ಹೇಳಿಕೆಯನ್ನು ನೀಡುತ್ತಲೇ ಇರುದ್ದಾರೆ. ಈ ವಿಚಾರಕ್ಕೆ ಸಂಬ0ಧಿಸಿದ0ತೆ ಈಗ ರಾಜಕೀಯ ವ್ಯಕ್ತಿಗಳ ಮಾತಿನ ಕದನ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಹಾಗ್ರಾದ್ರೆ ಯಾರು ಆ ವ್ಯಕ್ತಿಗಳು ಏನು? ಮಾತಿ ಚಕಮಕಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೆಲ್ಸ್.

ಇತ್ತಿಚಿಗೆ ಡಿಸಿಎಂ ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ. ದುರಹಂಕಾರ ಬೇಡ’ ಎಂದಿದ್ದಾರೆ. ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಡದಿ ರೈತರೆಂದು ಸಭೆ ಮಾಡಿದ್ದೀರಾ. ನಿಜವಾದ ರೈತರ ಗೋಳನ್ನು ಒಮ್ಮೆಯಾದರೂ ಕೇಳಿದ್ದೀರಾ? ರಿಯಲ್ ಎಸ್ಟೇಟ್ ಟ್ರೋಕರ್‌ಗಳು, ದಲ್ಲಾಳಿಗಳು, ಕಮಿಷನ್ ಏಜೆಂಟ್‌ಗಳು ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಕರೆದು ಸಭೆ ಮಾಡಿದ್ದು ಯಾವ ಪುರುಷಾರ್ಥಕ್ಕೆ’ ಎಂದು ಪ್ರಶ್ನಿಸಿದರು. ಡಿ.ಕೆ. ಸಾಹೇಬ್ರು ನನ್ನ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆ ಜನ ಕೊಟ್ಟಿರೋ ಡಿಸಿಎಂ ಸ್ಟೇಟಸ್ ನಾಡಿನ ಜನರ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು ದುರಹಂಕಾರ ಪಡದೇ, ದುಡ್ಡಿನ ಮದ ತಲೆಗೆ ಏರದೆ ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯಲಿ’ ಎಂದು ಹೇಳಿದರು.

ಜನ ನಿಮಗೆ ೧೩೬ ಸ್ಥಾನ ಕೊಟ್ಟು ಗೆಲ್ಲಿಸಿದ್ದಾರೆ. ಕುಣಿಯಲಾರದವಳು ನೆಲ ಡೊಂಕು ಅಂದAಗೆ ಮಾತಾಡ್ತಿದ್ದಾರೆ. ಮಿಸ್ಟರ್ ಶಿವಕುಮಾರ್ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ. ನಿಖಿಲ್ ಏನು ಅಂತ ಜನ ತೋರಿಸಿಕೊಡುತ್ತಾರೆ. ೨೦೨೮ಕ್ಕೆ ಇದೇ ಡಿ.ಕೆ. ಶಿವಕುಮಾರ್ ಮಾಜಿ ಆಗುತ್ತಾರೆ. ಹಾಲಿ ಆಗಿ ಇರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ’ ಎಂದಿದ್ದಾರೆ. ನನ್ನ ಸ್ಟೇಟಸ್ ಬಗ್ಗೆ ಮಾತನಾಡುವ ಬದಲು, ಜನ ನೀಡಿದ ಡಿಸಿಎಂ ಸ್ಥಾನಕ್ಕೆ ದುರಹಂಕಾರ ಬಿಟ್ಟು ಕೆಲಸ ಮಾಡಿ. ಸಿಎಂ-ಡಿಸಿಎA ಕುರ್ಚಿ ಕಿತ್ತಾಟ ಬಿಟ್ಟು, ದೆಹಲಿಗೆ ಹೋಗಿ ನಿಮ್ಮ ಪಕ್ಷದ ‘ಕೂಲಿ’ ಪಡೆದುಕೊಳ್ಳಿ” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ಬಿಡದಿಯಲ್ಲಿ ದಲ್ಲಾಳಿಗಳ ಸಭೆ ಮಾಡಿದ್ದೀರಿ ಎಂದು ಟೀಕಿಸಿ, “೨೦೨೮ಕ್ಕೆ ಡಿಕೆಶಿ ಮಾಜಿಯಾಗಲಿದ್ದು, ಅಧಿಕಾರ ಶಾಶ್ವತವಲ್ಲ” ಎಂದು ಎಚ್ಚರಿಸಿದ್ದಾರೆ.


Share This News