ಹಲವಾರು ವಿಷಯಗಳಲ್ಲಿ ಟೀಕೆಗಳ ಹಣೆ ಪಟ್ಟಿ ಪಡೆದಿದ್ದ ನಟ ವಿಜಯ್‌ ಇದೀಗ ತಮಿಳುನಾಡಿನ ಜನರ ಮನಸ್ಸನ್ನು ಗೆದ್ದಿದ್ದಾರೆ, ಇನ್ನು ಇವರ ಪ್ರಸ್ತುತ ರಾಜಕೀಯ ನಡೆ ನೋಡುವುದಾದರೇ,ಟಿವಿಕೆ ಬಳಿ 108 ಶಾಸಕರಿದ್ದು, 118 ಅಂಕ ತಲುಪುವುದು ಹೇಗೆ ಎಂಬುದರ ಕುರಿತು ಚರ್ಚೆಗಳ ಬಿಸಿ ಗಾಳಿ ಬೀಸುತ್ತಿದೆ.

ಏತನ್ಮಧ್ಯೆ, ಬಿಜೆಪಿ ಇದ್ದಕ್ಕಿದ್ದಂತೆ ತಮಿಳುನಾಡು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಇಲ್ಲಿಯವರೆಗೆ ಬಿಜೆಪಿ ಸರ್ಕಾರ ರಚನೆಯ ಚೌಕಟ್ಟಿನಲ್ಲಿ ಕಾಣಿಸಿಕೊಂಡಿಲ್ಲ ಆದರೆ ಈಗ, ಬಿಜೆಪಿ ಎಐಎಡಿಎಂಕೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮಸಲತ್ತು ಮಾಡಿದೆ. ಈಗ ಎಲ್ಲರ ಗಮನ ತಮಿಳುನಾಡಿನತ್ತ ಸುಳಿಯುತ್ತಿದೆ.

ದಳಪತಿ ವಿಜಯ್ ,ಟಿವಿಕೆ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಆದರೆ ಟಿವಿಕೆ ಪಕ್ಷಕ್ಕೆ ಬಹುಮತವಿಲ್ಲ. ಈ ಕಾರಣಕ್ಕೆ ನಟ ವಿಜಯ್‌ ಪರ ಪಕ್ಷಗಳ ಅಗತ್ಯವಿದೆ ನಟ ವಿಜಯ್ ಅವರ ಪಕ್ಷವಾದ ಟಿವಿಕೆಗೆ ಇತರ ಮಿತ್ರಪಕ್ಷಗಳ ಆಸರೆ ಬೇಕಿದೆ.

ವಿಜಯ್ ಸರ್ಕಾರ ರಚಿಸಲು ಒಟ್ಟು 118 ಶಾಸಕರು ಬೇಕು, ಆದರೆ ಟಿವಿಕೆ ಬಳಿ ಕೇವಲ 108 ಶಾಸಕರಿದ್ದಾರೆ. 118 ಅಂಕಗಳನ್ನು ತಲುಪುವುದು ಹೇಗೆ ಎಂಬುದರ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ.

ಏತನ್ಮಧ್ಯೆ, ಬಿಜೆಪಿ ಇದ್ದಕ್ಕಿದ್ದಂತೆ ಸದ್ದೇ ಇಲ್ಲದೆ ತಮಿಳುನಾಡು ರಾಜಕೀಯ ಕ್ಷೇತ್ರ ಪ್ರವೇಶಿಸಿದೆ. ಇಲ್ಲಿಯವರೆಗೆ, ಬಿಜೆಪಿ ಸರ್ಕಾರ ರಚನೆಯ ಚೌಕಟ್ಟಿನಲ್ಲಿ ಇರಲಿಲ್ಲ. ಆದರೆ ಈಗ, ಬಿಜೆಪಿ ಎಐಎಡಿಎಂಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದು ವಿಜಯ್‌ಗೆ ಸಿಹಿ ಸುದ್ದಿಯಾಗಿದೆ.

ಒಟ್ಟಿನಲ್ಲಿ ದಳಪತಿ ವಿಜಯ್ ,ಟಿವಿಕೆ ಸರ್ಕಾರ ರಚಿಸಲು ಎನೆಲ್ಲಾ ಪ್ರಯತ್ನ ಮಾಡುತ್ತಾರೆ ಎನ್ನುವುದು ಕಾದುನೋಡಬೇಕಿದೆ.