Share This News

ಬೆಂಗಳೂರು: ಅಮಿತ್ ಶಾ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ? ಅಥವಾ ಪುಗ್ಸಟ್ಟೆ ನೋಡ್ತಾರಾ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟಿಕೆಟ್‌ಗಾಗಿ ಒತ್ತಡದಿಂದ ಐಪಿಎಲ್ ಪೈನಲ್ ಮ್ಯಾಚ್ ಸ್ಥಳಾಂತರಗೊಂಡಿದೆ , ಐಪಿಎಲ್‌ ಟಿಕೆಟ್ ಶಾಸಕರು ಕೇಳಿದ್ದಾರೆ. ಎಂಪಿಗಳು ಕೇಳಿದ್ದಾರೆ ಅಂತ ಏನಿಲ್ಲ.‌ ಮೊದಲು ಸದನದಲ್ಲಿ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪ ಮಾಡಿದ್ರು. ಬಳಿಕ ಎಲ್ಲರೂ ಅದಕ್ಕೆ ಧ್ವನಿಗೂಡಿಸಿದ್ದರು ಎಂದರು

ಸದನದಲ್ಲಿ ಬಿಜೆಪಿ ವಿಪಕ್ಷ ನಾಯಕರೇ ಐಪಿಎಲ್‌ ಟಿಕೆಟ್‌ ಕೇಳಿದ್ದರು. ಹಾಗಾದರೆ ಮ್ಯಾಚ್ ಹೋಗಲು ಬಿಜೆಪಿನೇ ಕಾರಣನಾ? ಸುಮ್ಮನೆ ಎನೇನೋ ಹೇಳೋದಲ್ಲ. ಹೆಚ್ಚು ಲಾಭ ಬೇಕಿದೆ. ಅದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಟಿಕೆಟ್‌ ಕೊಡುವುದು ತಪ್ಪು ಅಂತ ಕೆಲವರು ಹೇಳಿದ್ದಾರೆ. ಈಗಾಗಲೇ ಐದಾರು ಮ್ಯಾಚ್ ನಡೆದಿದೆ. ಅದೆಲ್ಲ ಹೇಗೆ ನಡೆಯಿತು? ಈಗ ಲಾಭಕ್ಕಾಗಿ ಗುಜರಾತ್‌ಗೆ ಶಿಫ್ಟ್‌ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


Share This News