Share This News

ಬೆಂಗಳೂರು: BMTC ಬಸ್‌ಗಳಲ್ಲಿ ಪ್ರದರ್ಶಿಸಲಾಗುವ ಸಾರ್ವಜನಿಕ ಪ್ರಕಟಣೆಗಳು ಹಾಗೂ ಜಾಹೀರಾತುಗಳು ಕಾನೂನಾತ್ಮಕ ನಿಯಮಗಳಿಗೆ ಒಳಪಟ್ಟಿರಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೂಚಿಸಿದೆ.

ಈ ಸಂಬಂಧ BMTC ಮುಖ್ಯ ಸಂಚಾರ ವ್ಯವಸ್ಥಾಪಕರು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಬಸ್‌ಗಳಲ್ಲಿ ನಿಯಮಬಾಹಿರವಾಗಿ ಅಥವಾ ಅನಧಿಕೃತವಾಗಿ ಪ್ರದರ್ಶಿಸಲಾಗಿರುವ ಯಾವುದೇ ಪ್ರಕಟಣೆಗಳು ಮತ್ತು ಜಾಹೀರಾತುಗಳನ್ನು ತಕ್ಷಣ ತೆರವುಗೊಳಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

ನಿಯಮ ಉಲ್ಲಂಘಿಸಿದರೆ ಮೇಲ್ವಿಚಾರಕರೇ ಹೊಣೆ

ಮೋಟಾರು ವಾಹನ ಕಾಯ್ದೆಯ ನಿಯಮ 94(1)(v) ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ PIL No. 25576/2014 ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

BMTC ಬಸ್‌ಗಳಲ್ಲಿ ಶಾಸನಬದ್ಧವಲ್ಲದ ಅಥವಾ ಅನಧಿಕೃತ ಪ್ರಕಟಣೆಗಳು ಕಂಡುಬಂದರೆ, ಸಂಬಂಧಿಸಿದ ಘಟಕದ 2ನೇ ಹಂತದ ಮೇಲ್ವಿಚಾರಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಂಸ್ಥೆ ಎಚ್ಚರಿಸಿದೆ.

ಅನಧಿಕೃತ ಜಾಹೀರಾತುಗಳಿಗೆ ಕಡಿವಾಣ

ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ನಿಯಮಾನುಸಾರ ಜಾಹೀರಾತು ಹಾಗೂ ಪ್ರಕಟಣೆಗಳನ್ನು ಮಾತ್ರ ಪ್ರದರ್ಶಿಸುವಂತೆ BMTC ಸೂಚಿಸಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗದಿಪಡಿಸುವುದಾಗಿ ತಿಳಿಸಿದೆ.


Share This News