Share This News

ಭಾರತದ ಚುನಾವಣಾ ರಾಜಕೀಯದಲ್ಲಿ ಅಚಾನಕ್ ವೈರಲ್ ಆದ ಬ್ರೆಜಿಲ್ ಮೂಲದ ಮಾಡೆಲ್ ಲಾರಿಸ್ಸಾ ನೇರಿ, ತನ್ನ ಫೋಟೋವನ್ನು ಮತದಾರರ ಗುರುತಿನ ಚೀಟಿಯಲ್ಲಿ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಭಾರತಕ್ಕೆ ಎಂದಿಗೂ ಬಂದಿಲ್ಲ. ನನ್ನ ಫೋಟೋವನ್ನು ಯಾರೋ ದುರುಪಯೋಗ ಮಾಡಿದ್ದಾರೆ. ಇದು ನಿಜಕ್ಕೂ ‘ಮೆಡ್ನೆಸ್’,” ಎಂದು ಲಾರಿಸ್ಸಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹರಿಯಾಣದ ರೈ ಕ್ಷೇತ್ರದಲ್ಲಿ ಒಂದು ಮತದಾರರ ಗುರುತಿನ ಚೀಟಿಯನ್ನು 22 ಬಾರಿ ಬಳಸಲಾಗಿದೆ ಎಂಬ ಆರೋಪವನ್ನು ಹೊರಿಸಿ, ಬ್ರೆಜಿಲ್ ಮಾಡೆಲ್‌ನ ಫೋಟೋ ಹೊಂದಿರುವ ID ಕಾರ್ಡ್ ಅನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸಿದರು. ಈ ID ಕಾರ್ಡ್‌ನಲ್ಲಿ ಲಾರಿಸ್ಸಾ ನೇರಿ ಎಂಬ ಬ್ರೆಜಿಲ್ ಮೂಲದ ಮಹಿಳೆಯ ಫೋಟೋ ಇದ್ದು, ಅದು ಸ್ಟಾಕ್ ಇಮೇಜ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

 ಲಾರಿಸ್ಸಾ ನೇರಿ ಯಾರು?

ಲಾರಿಸ್ಸಾ ನೇರಿ, ಬ್ರೆಜಿಲ್‌ನ ಬೆಲೊ ಹೋರಿಜೊಂಟೆ ನಗರದಲ್ಲಿ ಹೆರ್‌ಡ್ರೆಸರ್ ಆಗಿ ಕೆಲಸ ಮಾಡುತ್ತಾರೆ. ಅವರು ಮಾಡೆಲ್ ಆಗಿದ್ದರೂ, ಈ ಫೋಟೋ ಅವರು 18–20 ವರ್ಷದಾಗಿದ್ದಾಗ ತೆಗೆದ ಚಿತ್ರ ಎಂದು ಹೇಳಿದ್ದಾರೆ. “ನನ್ನ ಫೋಟೋವನ್ನು ಭಾರತೀಯ ಮತದಾರರ IDಗೆ ಬಳಸಿದ್ದಾರೆ ಎಂಬುದು ನನಗೆ ಶಾಕ್. ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ,” ಎಂದು ಲಾರಿಸ್ಸಾ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಈ ಪ್ರಕರಣವನ್ನು ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಎಂದು ಬಣ್ಣಿಸಿದೆ.ಬಿಜೆಪಿ ನಾಯಕ ಕಿರೆನ್ ರಿಜಿಜು ಈ ಆರೋಪವನ್ನು “ನಕಲಿ ವಿಷಯ” ಎಂದು ತಿರಸ್ಕರಿಸಿದ್ದಾರೆ.ಸ್ಥಳೀಯ ಮತದಾರರು ಕೂಡ NDTVಗೆ “ನಾವು ನಮ್ಮ ಮತ ಚಲಾಯಿಸಿದ್ದೇವೆ, ಆ ಫೋಟೋ ಯಾರದ್ದು ಗೊತ್ತಿಲ್ಲ” ಎಂದು ಹೇಳಿದ್ದಾರೆ.


Share This News