ಪ್ರಪಂಚಾದ್ಯಂತ ಸೊಳ್ಳೆಗಳ ಕಾಟ ಜಾಸ್ತಿಯಾಗ್ತಿದೆ. ಈ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಅನೇಕರು ಸೊಳ್ಳೆ ನಿವಾರಕಗಳನ್ನ ಬಳಸ್ತಾರೆ. ಆದ್ರೂ ಸೊಳ್ಳೆಕಾಟ ಮಾತ್ರ ಕಡಿಮೆ ಆಗೋದಿಲ್ಲಾ. ಇದೀಗ ಪಂಚದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ವಿನೂತನ ಯೋಜನೆಯನ್ನು ಕೈಗೊಂಡಿದೆ.
ಡಿಬಗ್ ಎಂಬ ಈ ಯೋಜನೆಯ ಅಡಿಯಲ್ಲಿ, 3.2 ಕೋಟಿ ಗಂಡು ಸೊಳ್ಳೆಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಸೊಳ್ಳೆಗಳು ಓಲ್ಬಾಚಿಯ ಪೈಪಿ ಎಂಬ ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಇವು ಹೆಣ್ಣು ಸೊಳ್ಳೆಗಳೊಂದಿಗೆ ಮಿಲನಗೊಂಡಾಗ ಇಡುವ ಮೊಟ್ಟೆಗಳು ಒಡೆಯುವುದಿಲ್ಲ. ಇದರಿಂದ ಹೊಸ ಸೊಳ್ಳೆಗಳ ಜನನವನ್ನು ತಡೆದು ಕ್ರಮೇಣ ಸೊಳ್ಳೆ ಸಂತತಿಯನ್ನೇ ನಿರ್ಮೂಲನೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲವಾದ್ದರಿಂದ ಅವು ಮನುಷ್ಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಡೆಂಗ್ಯು, ಜಿಕಾ ಮತ್ತು ಚಿಕನ್ಗುನ್ಯಾದಂತಹ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಇದು ಪರಿಣಾಮಕಾರಿ ರಾಸಾಯನಿಕ-ಮುಕ್ತ ಪರ್ಯಾಯ ಮಾರ್ಗವಾಗಿದೆ. ಪ್ರಸ್ತುತ, ಈ ಯೋಜನೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಪರಿಶೀಲನೆಯಲ್ಲಿದೆ.
