Share This News

ನವೆಂಬರ್ 27, 2025ರಂದು ಚೀನಾದ ಯುನಾನ್ ಪ್ರಾಂತ್ಯದ ಕುನ್ಮಿಂಗ್ ನಗರದ ಲುವೋಯಾಂಗ್ ಟೌನ್ ರೈಲು ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಭೂಕಂಪ ಪತ್ತೆ ಸಾಧನಗಳನ್ನು ಪರೀಕ್ಷಿಸುತ್ತಿದ್ದ ಟೆಸ್ಟ್ ರೈಲು ಒಂದು ವಕ್ರ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ರೈಲ್ವೇ ಕಾರ್ಮಿಕರ ಗುಂಪಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 11 ಮಂದಿ ರೈಲ್ವೇ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 2 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೂ ಕಲ ಗಂಟೆಗಳ ಹಿಂದಷ್ಟೇ ಹಾಂಗ್‌ ಕಾಂಗ್‌ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ 44 ಜನ ಬಲಿ, ನೂರಾರು ಜನರು ನಾಪತ್ತೆ ಇನ್ನು, ಮಧ್ಯಾಹ್ನದ ವೇಳೆಗೆ ಸಾರಿಗೆ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಪಷ್ಟ ನಿಯಮಗಳು ಮತ್ತು ಸಡಿಲ ಸುರಕ್ಷತಾ ಮಾನದಂಡಗಳಿಂದಾಗಿ ಚೀನಾದಲ್ಲಿ ಕೈಗಾರಿಕಾ ಅಪಘಾತಗಳು ಸಾಮಾನ್ಯವಾಗಿದೆ. ಕುನ್ಮಿಂಗ್ ರೈಲ್ವೇ ಬ್ಯೂರೋ ತುರ್ತು ಪ್ರತಿಕ್ರಿಯೆ ಯೋಜನೆ ಜಾರಿಗೆ ತಂದಿದೆ. ಸ್ಥಳೀಯ ಸರ್ಕಾರದೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಲಾಗಿದೆ. ನಿಲ್ದಾಣದಲ್ಲಿ ಸೇವೆ ಈಗಾಗಲೇ ಸಾಮಾನ್ಯ ಸ್ಥಿತಿಗೆ ಮರಳಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ವಿಶೇಷ ತನಿಖೆ ಆರಂಭವಾಗಿದೆ.

ಇದು ಚೀನಾದಲ್ಲಿ ಕಳೆದ ದಶಕದ ಅತ್ಯಂತ ಭೀಕರ ರೈಲು ಅಪಘಾತ ಎಂದು ವರದಿಯಾಗಿದೆ. ಚೀನಾಕ್ಕೆ ವಿಶ್ವದ ಅತಿ ದೊಡ್ಡ ರೈಲು ಜಾಲವಿದ್ದು, 160,000 ಕಿಮೀ ವ್ಯಾಪ್ತಿಯಲ್ಲಿ ಪ್ರತಿವರ್ಷ ಅಬ್ಜಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇಂತಹ ದುರಂತವು ರೈಲು ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಹಾಂಗ್‌ಕಾಂಗ್‌ನಲ್ಲಿ ನಡೆದ ಅಗ್ನಿ ದುರಂತದ ಬೆನ್ನಲ್ಲೇ ಚೀನಾದಲ್ಲಿ ಸಂಭವಿಸಿದ ಈ ರೈಲು ಅಪಘಾತವು ದೇಶಕ್ಕೆ ಮತ್ತೊಂದು ಆಘಾತ ತಂದಿದೆ. 11 ಕಾರ್ಮಿಕರ ಸಾವಿನಿಂದ ರೈಲು ಇಲಾಖೆಯ ಸುರಕ್ಷತಾ ವ್ಯವಸ್ಥೆ, ತುರ್ತು ಪ್ರತಿಕ್ರಿಯೆ ಹಾಗೂ ಕಾರ್ಮಿಕರ ರಕ್ಷಣೆ ಕುರಿತಂತೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳ ಅಗತ್ಯತೆ ಸ್ಪಷ್ಟವಾಗಿದೆ.


Share This News