Share This News

ತೆಹ್ರಾನ್: ಯುದ್ಧದ ಅಂಚಿನಲ್ಲಿದ್ದ ಅಮೆರಿಕ,ಇರಾನ್ ಇದೀಗ ಒಪ್ಪಂದಕ್ಕೆ ಮುಂದಾಗುತ್ತಿವೆ. ಉಭಯ ರಾಷ್ಟ್ರಗಳ ನಡುವಿನ ಹಗೆತ ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಅಂತರಾಷ್ಟ್ರೀಯ ತೈಲ ಸಾಗಾಣಿಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿ ಪುನಃ ಮುಕ್ತಗೊಳಿಸಲು ’30 ದಿನ ಕ್ರಿಯಾ ಯೋಜನೆ’ಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಸಂಘರ್ಷದಿಂದಾಗಿ ಸ್ಥಗಿತಗೊಂಡಿದ್ದ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ ಸಮ್ಮತಿಸುವ ಸಾಧ್ಯತೆಯಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಗೆ ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ ಎನ್ನಲಾಗಿದೆ.

ಎರಡೂ ದೇಶಗಳು ಸದ್ಯಕ್ಕೆ ಯಾವುದೇ ವಾಯುದಾಳಿ ಅಥವಾ ಮಿಲಿಟರಿ ಕಾರ್ಯಾಚರಣೆ ನಡೆಸದಂತೆ ಒಂದು ತಿಂಗಳ ಕಾಲ ವಿರಾಮ ಘೋಷಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ.


Share This News