Share This News

ಭೂಕಬಳಿಕೆ ನಿಷೇಧ ನ್ಯಾಯಾಲಯದ ಆದೇಶ.

ಬೆಂಗಳೂರು: ಸರಕಾರಿ ಕೆರೆಯ ಜಮೀನನ್ನು ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಾಣ ಮಾಡಿದ್ದ 3 ಆರೋಪಿಗಳಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು, ಅತ್ತಿಬೆಲೆ ಹೋಬಳಿ, ಹೆಬ್ಬಗೋಡಿ ಆರೋಪಿಗಳಾದ ಕೃಷ್ಣಪ್ಪ, ನಂಜಪ್ಪ, ರಾಮಯ್ಯ, ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ, ಲಕ್ಷ್ಮೀದೇ ಮತ್ತು ಪಿಳ್ಳಪ್ಪ ಅವರು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡು ಶೌಚಾಲಯ ಮತ್ತು ವಾಸದ ಮನೆಗಳನ್ನು ನಿರ್ಮಾಣ ಮಾಡಿದ್ದು, ಅವರ ವಿರುದ್ಧ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಹೈಕೋರ್ಟ್ ಗ್ರಾಮದ 32 ಎಕರೆ 13 ಗುಂಟೆ ಸುದ್ದಿಗಳು ಸರಕಾರಿ ಕೆರೆಯ ಜಮೀನನ್ನು ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಸಾಕ್ಷ್ಯಾಧಾರಗಳನ್ನು ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ದೋಷಾರೋಪಣೆ ವಿಶೇಷ ನ್ಯಾಯಾಲಯದಲ್ಲಿ ಪಟ್ಟಿ ಸಲ್ಲಿಸಿದ್ದು. ನ್ಯಾಯಾಲಯವು ವಿಚಾರಣೆ ನಡೆಸಿದೆ. ಈ ವಿಚಾರಣಾ ಕಾಲದಲ್ಲಿ ಆರೋಪಿಗಳು ಸರಕಾರಿ ಕೆರೆಯ ಸ್ವತ್ತನ್ನು ಆಕ್ರಮವಾಗಿ ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆ ಗಳನ್ನು ನಿರ್ಮಾಣ ಮಾಡಿರುವುದು ಧೃಡಪಟ್ಟಿದ್ದರಿಂದ ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ ಮತ್ತು ಲಕ್ಷ್ಮೀದೇವಿ ಅವರಿಗೆ 1 ವರ್ಷ ಸಜೆ ಮತ್ತು 5,000 ರು. ದಂಡ ವಿಧಿಸಿ, 13 ಡಿ. 2024ರಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶಿಸಿದೆ.


Share This News