ತಾಳೆ ಎಣ್ಣೆ (ಪಾಮ್ ಆಯಿಲ್), ಸೋಯಾಬೀನ್, ಸೂರ್ಯಕಾಂತಿ, ಶೇಂಗಾ, ಸಾಸಿವೆ, ಎಳ್ಳು, ಅಕ್ಕಿ ಹೊಟ್ಟಿನಿಂದ ಮಾಡಿದ ಎಣ್ಣೆ, ಹತ್ತಿ, ಜೋಳದ ಎಣ್ಣೆಗಳಿಗೆ ಈ ಎಸ್‌ಓಪಿ ಅನ್ವಯ ಆಗಲಿದೆ. 200 ಎಂಎಲ್‌ಗಿಂತ ಕಡಿಮೆ ಇರುವ ಪ್ಯಾಕ್‌ಗಳಿಗೆ ಈ ನಿಯಮ ಅನ್ವಯಿಸಲ್ಲಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಪ್ಯಾಕೇಜಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ, ಕಂಪನಿಗಳು 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಎಣ್ಣೆಯನ್ನು ಮಾರಾಟ ಮಾಡಬೇಕು. ಪ್ಯಾಕೆಟ್ ಮೇಲೆ ಎಣ್ಣೆಯ ಪರಿಮಾಣ ಹಾಗೂ ತೂಕ ಎರಡನ್ನೂ ಕಡ್ಡಾಯವಾಗಿ ನಮೂದಿಸಬೇಕು. ಇದನ್ನೆಲ್ಲಾ ಬದಲಾಯಿಸಲು ಕಂಪನಿಗಳಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳು 650g, 700g, 810g, 850g, 870g 970g ಇತ್ಯಾದಿ ವಿಚಿತ್ರ ಅಳತೆಗಳ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ.
ಇವು ನೋಡಲು ಒಂದೇ ತರಹ ಕಂಡರೂ ತೂಕದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಗ್ರಾಹಕರಿಗೆ ಎರಡು ವಿಭಿನ್ನ ಬ್ರ್ಯಾಂಡ್‌ಗಳ ಬೆಲೆಯನ್ನು ಹೋಲಿಕೆ ಮಾಡಿ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಕಂಪನಿಗಳು ಬೆಲೆ ಕಡಿಮೆ ಇರುವಂತೆ ತೋರಿಸಲು ಪ್ಯಾಕೆಟ್‌ನ ತೂಕವನ್ನು ಗುಟ್ಟಾಗಿ ಕಡಿಮೆ ಮಾಡುತ್ತಿದ್ದವು. ಇದನ್ನೆಲ್ಲಾ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ
ತಾಳೆ ಎಣ್ಣೆ (ಪಾಮ್ ಆಯಿಲ್), ಸೋಯಾಬೀನ್, ಸೂರ್ಯಕಾಂತಿ, ಶೇಂಗಾ, ಸಾಸಿವೆ, ಎಳ್ಳು, ಅಕ್ಕಿ ಹೊಟ್ಟಿನಿಂದ ಮಾಡಿದ ಎಣ್ಣೆ, ಹತ್ತಿ, ಜೋಳದ ಎಣ್ಣೆಗಳಿಗೆ ಈ ಎಸ್‌ಓಪಿ ಅನ್ವಯ ಆಗಲಿದೆ. 200 ಎಂಎಲ್‌ಗಿಂತ ಕಡಿಮೆ ಇರುವ ಪ್ಯಾಕ್‌ಗಳಿಗೆ ಈ ನಿಯಮ ಅನ್ವಯಿಸಲ್ಲ
ಕಂಪನಿಗಳು ತಮ್ಮ ಹಳೆಯ ಪ್ಯಾಕೇಜಿಂಗ್ ಸ್ಟಾಕ್ ಅನ್ನು ಖಾಲಿ ಮಾಡಲು 3 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಇಲಾಖೆಯ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.
