ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಅವರ ಪತ್ನಿ ವಿಜಯಲಕ್ಷ್ಮಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ನಟ ಝೈದ್ ಖಾನ್ ಮಂಗಳವಾರ ಜೈಲಿಗೆ ಆಗಮಿಸಿದ್ದರು.
ನಟ ದರ್ಶನ್ ಅವರ ಆರೋಗ್ಯ ಮತ್ತು ಕ್ಷೇಮ ವಿಚಾರಿಸುವ ಸಲುವಾಗಿ ಮೂವರೂ ಒಟ್ಟಿಗೆ ಕಾರಾಗೃಹಕ್ಕೆ ಭೇಟಿ ನೀಡಿದರು. ದರ್ಶನ್ ಅವರ ನಿಕಟ ಆಪ್ತರಾಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ನಟ ಝೈದ್ ಖಾನ್ ಅವರು ವಿಜಯಲಕ್ಷ್ಮಿ ಅವರಿಗೆ ಸಾಥ್ ನೀಡಿದರು.
ಈ ವೇಳೆ ನಟ ಝೈದ್ ಖಾನ್ ಅವರು ಜೈಲಿನಲ್ಲಿರುವ ದರ್ಶನ್‌ಗಾಗಿ ಹಣ್ಣು-ಹಂಪಲುಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು.
ಕಾರಾಗೃಹದಲ್ಲಿ ದರ್ಶನ್ ಅವರನ್ನು ಮುಖಾಮುಖಿಯಾಗಿ ಭೇಟಿಯಾದ ತಂಡವು ಅವರ ಆರೋಗ್ಯ ಹಾಗೂ ಕ್ಷೇಮಸಮಾಚಾರದ ಬಗ್ಗೆ ವಿಚಾರಿಸಿತು. ಭೇಟಿಯ ವೇಳೆ ದರ್ಶನ್ ಅವರ ಆರೋಗ್ಯ ಸ್ಥಿತಿಗತಿಯ ಕುರಿತು ಸುದೀರ್ಘವಾಗಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
