Share This News

ಹೆಣ್ಣುಮಕ್ಕಳು ಲಿಪ್‌ಸ್ಟಿಕ್‌ ಇಲ್ಲದೆ ಆಚೆಯೇ ಬರೋದಿಲ್ಲಾ. ಆದ್ರೆ ಈ ಲಿಪ್‌ಸ್ಟಿಕ್‌ಗೆ ಎಷ್ಟೆಲ್ಲಾ ಕೆಮಿಕಲ್‌ಗಳನ್ನ ಬಳಸ್ತಾರೆ ಅನ್ನೋದು ನಿಮಗೆ ಗೊತ್ತಾ? ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಲಿಪ್‌ಸ್ಟಿಕ್‌ನಲ್ಲಿ ಕ್ಯಾಡ್ಮಿಯಮ್‌ ಮತ್ತು ಸೀಸದ ಅಂಶಗಳು ಕಂಡು ಬಂದಿದೆ.

ಈ ಲೋಹಗಳು ಬಹಳಾನೆ ವಿಷಕಾರಿ ಆಗಿದ್ದು, ಈ ಲಿಪ್‌ಸ್ಟಿಕ್‌ ಹಚ್ಚೋದ್ರಿಂದ ಶ್ವಾಸಕೋಶ ಕ್ಯಾನ್ಸರ್‌, ಮೂತ್ರಪಿಂಡಗಳಿಗೆ ಹಾನಿಯಾಗಲಿದೆ. ಮೂಳೆಗಳ ಸಮಸ್ಯೆ, ಹಾರ್ಮೋನ್‌ ಇಂಬ್ಯಾಲೆನ್ಸ್‌ ಸಮಸ್ಯೆಗಳು, ತುಟಿ ಕ್ಯಾನ್ಸರ್‌, ಚರ್ಮದ ಸಮಸ್ಯೆಗಳು ಸೇರಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲಿದೆ.

ಹೀಗಾಗಿ ನೀವು ಲಿಪ್‌ಸ್ಟಿಕ್‌ ಖರೀದಿ ಮಾಡೋದಕ್ಕೂ ಮುನ್ನ ನೂರಲ್ಲ ಸಾವಿರ ಬಾರಿ ಯೋಚಿಸಿ. ಯಾಕಂದ್ರೆ ತುಟಿಯನ್ನ ಅಂದಗಾಣಿಸಲು ಹೋಗಿ ನಿಮ್ಮ ಜೀವವೇ ಹೋಗಬಹುದು. ಅಷ್ಟಾಗಿಯೂ ನೀವು ಲಿಪ್‌ಸ್ಟಿಕ್‌ ಬಳಸಲೇಬೇಕಾದ್ರೆ ಮನೆಯಲ್ಲೇ ತಯಾರಿಸಿ, ಇಲ್ಲ ಹೊರಗಿನ ಲಿಪ್ಸ್ಟಿಕ್‌ ಬಳಸಿದ್ರೆ ತಿನ್ನುವಾಗ, ಕುಡಿಯುವಾಗ ಲಿಪ್ಸ್‌ಸ್ಟಿಕ್‌ ನಿಮ್ಮ ದೇಹಕ್ಕೆ ಹೋಗದಂತೆ ನೋಡಿಕೊಳ್ಳಿ


Share This News