ಶ್ರೀರಂಗಪಟ್ಟಣ ತಾಲೂಕು ಅಚ್ಚಪ್ಪನಕೊಪ್ಪಲು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು “ಪ್ರಕೃತಿ ರಕ್ಷಣಾ ಪ್ರತಿಜ್ಞೆ” ಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ,ವಿಶ್ವ ಪರಿಸರ ದಿನ ಅಂದರೆ ಜೂನ್ 5 ಕೇವಲ ಒಂದು ದಿನವಲ್ಲ. ಅದು ನಮಗೆ ಪ್ರಕೃತಿ ಕೊಟ್ಟ ಎಚ್ಚರಿಕೆ ಪತ್ರ. ಶಾಲೆ ಆವರಣಗಳಲ್ಲಿ ಗಿಡ ನೀಡುವುದು,ಪರಿಸರ ಸಂರಕ್ಷಣೆ ಕಾರ್ಯಗಳನ್ನು ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಪರಿಸರ ಪ್ರಜ್ಞೆ ಇರುವ ವಿದ್ಯಾರ್ಥಿ,ಜವಾಬ್ದಾರಿಯುತ ನಾಗರಿಕನಾಗುತ್ತಾನೆ ಎಂದು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಹೇಳಿದರು.
ಪರಿಸರ ಸಂರಕ್ಷಣೆ ಈಗಿನ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಮುಖ್ಯವಾಗಬೇಕು. ಆಟ ಪಾಠಗಳ ಜೊತೆಗೆ ಪ್ರಾಯೋಗಿಕ ಕೆಲಸ. ಗಿಡ ನೆಡುವುದು, ಕಸ ವಿಂಗಡಿಸುವುದು, ನೀರು ಉಳಿಸುವುದು, ಪರಿಸರವನ್ನು ಒಂದು ವಿಷಯ ಅಲ್ಲ, ಒಂದು ಅಭ್ಯಾಸವಾಗಿ ನೋಡಿ.ವಿಜ್ಞಾನ, ಸಾಮಾಜಿಕ ಶಾಸ್ತ್ರದ ಪಾಠವನ್ನು ನಿಜ ಜೀವನದಲ್ಲಿ ಪ್ರಯೋಗಿಸುವ ಅವಕಾಶ ಸಿಗುತ್ತದೆ. ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಆವರಣದಲ್ಲಿ ಹೂ ಮತ್ತು ಹಣ್ಣಿನ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕೆ. ಎಂ.ವರಲಕ್ಷ್ಮಿ, ಸಹ ಶಿಕ್ಷಕಿಯರಾದ ಶ್ರೀಮತಿ ಎಂ ಅನುಪಮ, ಶ್ರೀಮತಿ ಎಲ್ ಅನಿತ, ಸಹ ಶಿಕ್ಷಕ ಮೋಹನ್, ಎಸ್ ಡಿ ಎಂ ಸಿ ಉಪ ಅಧ್ಯಕ್ಷೆ ಶ್ರೀಮತಿ ಭವ್ಯ, ಅಂಗನವಾಡಿ ಕಾರ್ಯಕರ್ತೆ ಪ್ರೇಮಕುಮಾರಿ, ರೈತ ಹೋರಾಟಗಾರ ನದೀಮ್, ಪದ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
