ವಿಜಯನಗರದ ಕೂಡ್ಲಿಗಿ : ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರಿಗೆ , ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರ ನೇತೃತ್ವದ ಸರ್ಕಾರದಲ್ಲಿ ಮಂತ್ರಿಸ್ಥಾನ ನೀಡಬೇಕೆಂದು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಹಾಗೂ ರಾಜ್ಯದ ಮುಖಂಡರಲ್ಲಿ , ಮತ್ತು ಮುಖ್ಯಮಂತ್ರಿಗಳಾಗುತ್ತಿರುವ ಡಿ.ಕೆ.ಶಿವಕುಮಾರವರಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.
ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕ್ಷೇತ್ರದ ಪ್ರಮುಖ ಮುಖಂಡರು , ಜೂನ್ 2ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ. ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರೊಂದಿಗೆ ಅವರು , ತಮ್ಮ ಅಭಿವ್ಯಕ್ತತೆ ವ್ಯೆಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡರು , ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಟಿ. ಗುರುಸಿದ್ದನಗೌಡ ಮಾತನಾಡಿ , ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವೈಶಿಷ್ಟತೆಗಳ ಮೂಲಕ ಛಾಪು ಒತ್ತಿರುವ ಶಾಸಕರಾದ ಡಾ॥ ಎನ್ ಟಿ ಶ್ರೀನಿವಾಸ್ ರವರಿಗೆ. ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರ ಮಂತ್ರಿ ಮಂಡಲದಲ್ಲಿ , ಸಚಿವ ಸ್ಥಾನ ನೀಡಬೇಕೆಂಬುದು ಕ್ಷೇತ್ರದ ಸಮಸ್ತ ಜನತೆಯ ಹಾಗೂ ಪಕ್ಷದ ಪ್ರತಿಯೊಬ್ಬರ ಮನವಿಯಾಗಿದೆ. ಡಾ ॥ ಎನ್ ಟಿ ಶ್ರೀನಿವಾಸ್ ರವರು ಕಳೆದ ಮೂರು ವರ್ಷಗಳಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಮನಗೆದ್ದಿದ್ದಾರೆ , ಹಾಗೂ ಪಕ್ಷ ನೀಡಿದ ಮಹತ್ತರವಾದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶಾಸಕರಾಗಿದ್ದಾರೆ.
ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಪಕ್ಷ ಸಂಘಟನೆ , ಹಾಗೂ ಶಾಸಕರಾಗಿ ಕರ್ಥವ್ಯ ಪಾಲನೆಯಲ್ಲಿ ಶ್ರದ್ಧೆ ಪ್ರಾಮಾಣಿಕತೆ ಮೆರೆಯೋ ಮೂಲಕ. ಪಕ್ಷದಲ್ಲಿನ ಎಲ್ಲಾ ಪ್ರಭಾವಿಗಳ ಮತ್ತು ಪಕ್ಷದ ವರಿಷ್ಠರ ಮನ ಗೆದ್ದಿದ್ದಾರೆ , ಹಿರಿಯ ರಾಜಕಾರಣಿಗಳಿಂದ ರಾಷ್ಟ್ರೀಯ ರಾಜ್ಯ ನಾಯಕರುಗಳಿಂದ ಶಹಬ್ಬಾಸ್ ಗಿರಿಗಳನ್ನು ಪಡೆದಿದ್ದಾರೆ. ಅವರು ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು 24 *7 ಸಮಯಗಳ ಕಾಲ , ಸಾಮಾಜಿಕ ಕಾಳಜಿ ಜನಪರ ಕಾಳಜಿಯೊಂದಿಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರೇನಾದರು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾದಲ್ಲಿ , ಎರೆಡೇ ವರ್ಷದಲ್ಲಿ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಮತ್ತು ಪಕ್ಷವನ್ನು ಮತ್ತಷ್ಟು ಮಗದಷ್ಟು ಸದೃಢಪಡಿಸಲಿದ್ದಾರೆ , ಮುಂಬರುವ ಎಲ್ಲಾ ಹಂತದ ಚುನಾವಣೆಗಳಲ್ಲಿ. ಅವರು ಸ್ವಯಂಪ್ರೇರಣೆಯಿಂದ ಪಕ್ಷದ ಗೆಲುವಿಗಾಗಿ ಫಣ ತೊಟ್ಟು ಶ್ರಮಿಸಲಿದ್ದಾರೆ , ಹಾಗೂ ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಯಾವುದೇ ಇಲಾಖೆಯ ಸವಿವರನ್ನಾಗಿ ಮಾಡಿದರೂ ಕೂಡ ನಿಭಾಯಿಸುವ ಸದೃಡತೆ ಹೊಂದಿದ್ದಾರೆ. ಕಾರಣ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು , ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಹಾಗೂ ವೈದ್ಯರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡಬೇಕೆಂದು. ಕ್ಷೇತ್ರದ ಸಮಸ್ತ ಜನತೆಯ ಪರ ಕಾಂಗ್ರೇಸ್ ಮುಖಂಡರಾದ ತಾವು , ಈ ಮೂಲಕ ಅವರಲ್ಲಿ ಮನವಿ ಮಾಡುತ್ತಿರುವುದಾಗಿ ನುಡಿದರು.

ಈ ಸಂಬಂಧಿಸಿದಂತೆ ತಾವೆಲ್ಲರೂ ಒಟ್ಟಾಗಿ , ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ವರಿಷ್ಠರಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಸಂಬಂಧಿಸಿದ ಮನವಿ ಪತ್ರಗಳನ್ನು , ಮೇಲ್ ಮೂಲಕ ಕಳುವಿಸಿ ಮನವಿ ಮಾಡಿ ಕೋರಲಾಗಿದೆ ಎಂದರು. ನಂತರ ಪಕ್ಷದ ಮುಖಂಡರಾದ ಮಾದಳ್ಳಿ ನಜೀರ್ ಸಾಹೇಬ್ , ಮಹಿಳಾ ಮುಖಂಡರಾದ ಶ್ರೀಮತಿ ಜಿಂಕಾಲ್ ನಾಗಮಣಿ , ಉದಯ ಜನ್ನು , ಟಿ.ಜಿ.ಮಲ್ಲಿಕಾರ್ಜುನ , ಕಾವಲ್ಲಿ ಶಿವಪ್ಪನಾಯಕ , ಎಮ್.ಬಿ.ಅಯ್ಯನಹಳ್ಳಿ ಅಜ್ಜನಗೌಡ ಮಾತನಾಡಿದರು. ಪಕ್ಷದ ಜಿಲ್ಲಾ ಮುಖಂಡರು , ತಾಲೂಕು , ಕ್ಷೇತ್ರದ ಮುಖಂಡರು , ವಿವಿದ ಬ್ಲಾಕ್ ಹಾಗೂ ವಿಭಾಗಗಳ ಗ್ರಾಮ ಘಟಕಗಳ ಮುಖಂಡರು. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
