Share This News

ಕರ್ನಾಟಕದಲ್ಲಿ ತಿಂಡಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು,ಇಡ್ಲಿ ₹೯೦, ದೋಸೆ ₹150 ಅಗ್ತಿದೆ .ಮಧ್ಯಮ ವರ್ಗಕ್ಕೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದ್ದು, ಇತ್ತ ಗ್ಯಾಸ್ ದರ ಜಾಸ್ತಿಯಾಗಿದೆ.ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಊಟ – ನಾಷ್ಟಾ ಬೆಲೆ ಈಗ ಗಗನಕ್ಕೆ ಏರಿದೆ.

ಮೀಲ್ಸ್ ₹100 ರಿಂದ ₹೧೫೦ ಬಿರಿಯಾನಿ ₹150 ರಿಂದ ₹250 , ₹350 ಆಗಬವುದು ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು . LPG ಸಿಲಿಂಡರ್ ದರ ನಿರಂತರ ಏರಿಕೆಯಿಂದ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದರಿಂದ ಇಡ್ಲಿ, ದೋಸೆ, ಮೀಲ್ಸ್, ಬಿರಿಯಾನಿ ಸೇರಿದಂತೆ ಹಲವಾರು ಆಹಾರ ಪದಾರ್ಥಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೋಟೆಲ್ ಸಂಘಗಳ ಪ್ರಕಾರ,ಗ್ಯಾಸ್, ತರಕಾರಿ, ಎಣ್ಣೆ ಹಾಗೂ ಕಾರ್ಮಿಕ ವೆಚ್ಚ ಹೆಚ್ಚಾದ ಕಾರಣ ದರ ಏರಿಕೆ ಅನಿವಾರ್ಯವಾಗಿದೆ.ಇತ್ತ ಸಣ್ಣ ಹೋಟೆಲ್‌ಗಳಿಗೆ ಉಳಿವಿನ ಹೋರಾಟ ಶುರುವಾಗಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲೂ ಕಾರ್ಮಿಕರು ಇದ್ದಾರೆ.ಕರ್ನಾಟಕದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ದರಗಳು ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಸಂಘವು ಸಹ ಎಚ್ಚರಿಸಿದೆ.


Share This News