Share This News

ಬೆಳಗಾವಿ: ಪ್ರೀತಿಗಾಗಿ ಪಾಗಲ್‌ ಪ್ರೇಮಿಯೊಬ್ಬರು ತನ್ನ ಲವ್ವರ್‌ ಜತೆ ಸೇರಿಕೊಂಡು ಗಂಡಮನೆಯಲ್ಲಿಯೇ ಕಳ್ಳತನ ಮಾಡಿರುವ ಘಟನೆಯೊಂದು ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.

ಸ್ವಂತ ಪತಿಯ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ಹಸೀನಾ ನದಾಫ್ ಎಂಬಾಕೆ ಶರೀಫ್ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರವೂ ಈಕೆ ತನ್ನ ಪ್ರಿಯಕರ ಹಣಮಂತ ಮಾರಾಪೂರ ಜೊತೆ ಸಂಪರ್ಕದಲ್ಲಿದ್ದಳು. ಪ್ರಿಯಕರನ ಜತೆ ಓಡಿಹೋಗಲು ಪ್ಲ್ಯಾನ್‌ ಮಾಡಿದ್ದರ ಈಕೆ, ತನ್ನ ಪತಿಯ ಮನೆಯಲ್ಲಿದ್ದ ಸುಮಾರು 21 ಲಕ್ಷ ರೂ. ಮೌಲ್ಯದ 154.6 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಇವರನ್ನು ಬಂಧಿಸಿ,ಬಂಧಿತರಿಂದ 11 ಸಾವಿರ ರೂ. ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣ ವಶಕ್ಕೆ ಪಡೆದಿದ್ದಾರೆ.


Share This News