ಬೆಂಗಳೂರು: ತಿಂಗಳ ಆರಂಭದಲ್ಲಿ ಅಕೌಂಟ್‌ಗೆ ಬೀಳುವ ಸಂಬಳ, ಎಷ್ಟೋ ಬಾರಿ ತಿಂಗಳ ಅರ್ಧದಲ್ಲೇ ಮುಗಿದಿರುತ್ತೆ! ಅಂಗಡಿಗೆ ಹೋಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗಲೇ ಎಷ್ಟೋ ಬಾರಿ ಬ್ಯಾಂಕ್ ಅಕೌಂಟ್‌ನಲ್ಲಿ ದುಡ್ಡಿಲ್ಲವೆಂದು ಗೊತ್ತಾಗುತ್ತದೆ. ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ ‘ಭಾರತ್‌ಪೇ’, ಯೆಸ್ ಬ್ಯಾಂಕ್ ಸಹಯೋಗದೊಂದಿಗೆ ‘ಭಾರತ್‌ಪೇ ಫ್ಲೆಕ್ಸ್’ ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.
ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪಾವತಿ ಮಾಡಿದಾಗ, ಆ ಹಣ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ‘ಭಾರತ್‌ಪೇ ಫ್ಲೆಕ್ಸ್’ ಎಂಬುದು ಯುಪಿಐ ಆಧಾರಿತ ಸಾಲದ ಸೌಲಭ್ಯವಾಗಿದೆ.
ನೀವು UPI ಬಳಕೆದಾರರಾಗಿದ್ರೆ ಈ ಸುದ್ದಿ ನಿಮಗಾಗಿ. ನಿಮಗೆ ಅರ್ಜೆಂಟ್ ಆಗಿ ಏನಾದ್ರೂ ಹಣ ಬೇಕಾದ್ರೆ ಬೇರೆಯವರನ್ನ ಕೇಳ್ಬೇಡಿ. ಇನ್ನುಮುಂದೆ ನಿಮ್ಮ UPI ನಿಮಗೆ ಬಡ್ಡಿರಹಿತ ಸಾಲವನ್ನ ನೀಡಲಿದೆ. ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪಾವತಿ ಮಾಡಿದಾಗ, ಆ ಹಣ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.
ಆದರೆ, ಭಾರತ್‌ಪೇ ಫ್ಲೆಕ್ಸ್ ಎಂಬುದು ಯುಪಿಐ ಆಧಾರಿತ ಸಾಲದ ಸೌಲಭ್ಯವಾಗಿದೆ. ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು, ಆನ್‌ಲೈನ್ ಶಾಪಿಂಗ್ ಮಾಡಲು, ಕರೆಂಟ್ ಬಿಲ್ ಕಟ್ಟಲು, ರೀಚಾರ್ಜ್ ಮಾಡಲು ಹಾಗೂ ಪೆಟ್ರೋಲ್ ಹಾಕಿಸಲು ಈ ಕ್ರೆಡಿಟ್ ಲೈನ್ ಬಳಸಬಹುದು. ಇನ್ನೊಂದು ಗುಡ್‌ನ್ಯೂಸ್ ಏನ್ ಗೊತ್ತಾ ಈ ಸಾಲದಲ್ಲಿ ಯಾವುದೇ ಬಡ್ಡಿ ಇಲ್ಲ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು, ಆನ್‌ಲೈನ್ ಶಾಪಿಂಗ್ ಮಾಡಲು, ಕರೆಂಟ್ ಬಿಲ್ ಕಟ್ಟಲು, ರೀಚಾರ್ಜ್ ಮಾಡಲು ಹಾಗೂ ಪೆಟ್ರೋಲ್ ಹಾಕಿಸಲು ಈ ‘ಕ್ರೆಡಿಟ್ ಲೈನ್’ ಅನ್ನು ಬಳಸಬಹುದು. ಆಕಸ್ಮಿಕವಾಗಿ ಎದುರಾಗುವ ತುರ್ತು ಖರ್ಚುಗಳನ್ನು ನಿಭಾಯಿಸಲು ಇದು ಗ್ರಾಹಕರಿಗೆ ನೆರವಾಗಲಿದೆ.
