ಡಿ.ಎಲ್. ಲಿಂಗರಾಜು, ಉದಯ ಟಿವಿ ವರದಿಗಾರರು ಹಾಗೂ ಹಿರಿಯ ಪತ್ರಕರ್ತರು ಮಾತನಾಡಿ, “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯ ರಾಜರಾಗಿದ್ದರೂ, ತಮ್ಮನ್ನು ಯಾವಾಗಲೂ ‘ಪ್ರಜೆಯ ಸೇವಕ’ ಅಂತಲೇ ಕರೆದುಕೊಳ್ಳುತ್ತಿದ್ದರು. ಇಂದಿನ ಮಾಧ್ಯಮ ಲೋಕದಲ್ಲಿ ಕೆಲಸ ಮಾಡುವ ನಮಗೆ ಇದು ದೊಡ್ಡ ಪಾಠ” ಎಂದು ಹೇಳಿದರು.
“ನಾಲ್ವಡಿಯವರ ಕಾಲದಲ್ಲಿ ಕೆ ಆರ್ ಎಸ್, ವಿಶ್ವವಿದ್ಯಾಲಯ, ಶಿಕ್ಷಣ, ಆರೋಗ್ಯ ,ಇವೆಲ್ಲ ಸುದ್ದಿಯಾಗುತ್ತಿದ್ದದ್ದು ಜನರ ಬದಲಾವಣೆಯಿಂದ. ಇಂದು ನಾವು ಸುದ್ದಿ ಮಾಡೋದೂ ಅದೇ ಆಗಿರಬೇಕು.ಟಿಆರ್‌ಪಿಗಾಗಿ ಅಲ್ಲ, ಸಮಾಜದ ಒಳಿತಿಗಾಗಿ” ಎಂದು ಅವರು ಮಾಧ್ಯಮದ ಪಾತ್ರವನ್ನು ನೆನಪಿಸಿದರು.
ದೊಡ್ಡಬ್ಯಾಡರಹಳ್ಳಿಯ ಈ ‘ನಾಲ್ವಡಿ ತಂಗುದಾಣ’ ನಮಗೆ ತೋರಿಸೋದು ರಾಜನಾಗಿದ್ದರೂ ಸಾಧಾರಣ ಮನೆಯಲ್ಲಿ ತಂಗುವ ಸರಳತೆ. ಈ ಸರಳತೆಯೇ ನಾಲ್ವಡಿಯನ್ನು ಜನರ ಹೃದಯಕ್ಕೆ ಹತ್ತಿರ ಮಾಡಿತು. ಇಂದಿನ ನಾಯಕರು ಮತ್ತು ಸಾರ್ವಜನಿಕ ಜೀವನದಲ್ಲಿರುವ ನಾವೆಲ್ಲರೂ ಈ ಗುಣವನ್ನು ಕಲಿಯಬೇಕು” ಎಂದು ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿ ನಾಲ್ವಡಿ ವಿಶ್ರಾಂತಧಾಮದಲ್ಲಿ ತಾಲೂಕು ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ “ನಾಲ್ವಡಿ ಕವಿಗೋಷ್ಠಿ” ಉದ್ಘಾಟಿಸಿ ಮಾತನಾಡಿದರು.
ನಾಲ್ವಡಿ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚಂದ್ರಶೇಖರಯ್ಯ ಅವರು ಮಾತನಾಡಿ, “ಕವಿತೆ ಅಂದರೆ ಕೇವಲ ಪದಗಳ ಆಟ ಅಲ್ಲ. ಅದು ಕಾಲದ ದಾಖಲೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲವನ್ನು ಕವಿಗಳು ‘ರಾಮರಾಜ್ಯ’ ಅಂತ ಕರೆದರು. ಯಾಕೆಂದರೆ ಆ ಕಾಲದಲ್ಲಿ ಕಲೆಗೆ, ಸಾಹಿತ್ಯಕ್ಕೆ, ರೈತನಿಗೆ, ವಿದ್ಯಾರ್ಥಿಗೆ ಎಲ್ಲರಿಗೂ ಸ್ಥಾನ ಇತ್ತು” ಎಂದು ಹೇಳಿದರು.
“ಇವತ್ತು ನಾವು ಇಲ್ಲಿ ಕವಿತೆ ಓದ್ತಾ ಇದ್ದೇವೆ ಅಂದರೆ, ಅದು ನಾಲ್ವಡಿ ಕಟ್ಟಿದ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಕೊಟ್ಟ ನೆಲೆ. ಕವಿ ತನ್ನ ನಾಡಿನ ಋಣ ತೀರಿಸೋದು ತನ್ನ ಬರಹದಿಂದ. ಇಂದಿನ ಕವಿಗಳು ನಾಲ್ವಡಿಯವರ ಆದರ್ಶವಾದ ‘ಜನಸೇವೆಯೇ ನನ್ನ ಉಸಿರು’ ಅನ್ನೋ ಮಾತನ್ನು ತಮ್ಮ ಕಾವ್ಯದ ಕೇಂದ್ರವಾಗಿಸಿಕೊಳ್ಳಬೇಕು” ಎಂದು ಅವರು ಕವಿಗಳಿಗೆ ಕರೆ ನೀಡಿದರು.
“ಈ ಗುಡಿ ಬೆಟ್ಟದ ತಂಗುದಾಣದಲ್ಲಿ ನಿಂತು ಬರೆದ ಕವಿತೆ, ಮೈಸೂರು ಅರಮನೆಯಲ್ಲಿ ಬರೆದ ಕವಿತೆಗಿಂತ ಹೆಚ್ಚು ಶಕ್ತಿಯುತ. ಯಾಕೆಂದರೆ ಇದು ನೆಲದ ವಾಸನೆ ಹೊತ್ತಿದೆ” ಎಂದು ಹೇಳಿದರು.ವಿನ್ಯಾಸಕರು ಹಾಗೂ ಛಾಯಾಚಿತ್ರಕಾರಕ್ಯಾತನಹಳ್ಳಿ ಗುರುರಾಜ್ ರವರಿಗೆನಾಲ್ವಡಿ ಪ್ರಶಸ್ತಿ ನೀಡಿ ಪುರಸ್ಕೃತಲಾಯಿತು.
ಗಾನಸುಮ ಪಟ್ಟಸೋಮನಹಳ್ಳಿ, ಶಂಕರಾನಂದ ಹಿರೇಮಠ, ಧನಂಜಯ್ ಪಾಂಡವಪುರ, ಲೋಕೇಶ್ ಕಲ್ಯಾಣ, ಕಲಾವಿದ ಪ್ರತಾಪ್, ಜಯಶಂಕರ್ ಕಡತನಾಳು,ಸುಜಾತ ಕೃಷ್ಣ, ಶೈಲಜಾ ಪ್ರಕಾಶ್, ದಡ್ಡ ಚಂದ್ರು, ಪ್ರಕಾಶ್ ಬೇಚಿನಕುಪ್ಪೆ, ಶಿವಕುಮಾರ್ ಆರಾಧ್ಯ, ಸುನೀಲ್ ಕುಮಾರ್, ನಾಸೀರ್ ಮೂಡಿಗೆರೆ, ಅಭಿಲಾಷ್, ದಿನೇಶ್ ಕವಿಗಳು ಕಾವ್ಯವಾಚನ ಮಾಡಿದರು. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೇನಾಗರ , ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ ಎಸ್ ವೆಂಕಟೇಶ್, ವಕೀಲರಾದ ಶ್ರೀಧರ್ ಕೋಡಾಲ, ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷಟಿ ಡಿ ಧರ್ಮ,ಪಟೇಲ್ ಡಿ ಎಂ ನಿಂಗೇಗೌಡ, ಡಿ ಎನ್ ರವಿ, ಪ್ರಸನ್ನ, ಕಠಾರಿ ಶಂಕರ,ಉಪನ್ಯಾಸಕ ಧನಂಜಯ, ಅನಿಲ್ ಕುಮಾರ್ ,ಧರ್ಮರತ್ನಕರ, ಡಿ ಎನ್ ಚಂದ್ರಶೇಖರ್ ಎಸ್ ಎಂ ಶಿವಕುಮಾರ್, ಗಂಜಾಂ ಶ್ರೀನಿವಾಸ್, ಸುರೇಶ್ ಮುಂತಾದವರು ಬಾಗಿಯಾಗಿದ್ದರು.
