Share This News

ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾದಿಗಳಿಗೆ ಮತ್ತು ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ, ಕೊಡಗು ಮತ್ತು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿರುವ ನೂತನ “ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ, ಶನಿವಾರಸಂತೆ ಹಾಗೂ ಸುಂದರ ಪ್ರಕೃತಿ ಸೌಂದರ್ಯದ ಬಿಸ್ಲೆ ಘಾಟ್ ಮಾರ್ಗವಾಗಿ ಈ ಹೊಸ ಸ್ಲೀಪರ್ ಬಸ್ ಸಂಚರಿಸಲಿದ್ದು, ಪ್ರವಾಸಿಗರಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ಇದು ವರದಾನವಾಗಲಿದೆ. ಕೊಡಗು ಮತ್ತು ಕರಾವಳಿಯ ಧಾರ್ಮಿಕ ಕ್ಷೇತ್ರಗಳ ನಡುವೆ ನೇರ ಸ್ಲೀಪರ್ ಬಸ್ ಸೌಕರ್ಯ ಇರಲಿಲ್ಲ.

ಸದ್ಯ ಈ ಹೊಸ ಸೇವೆಯಿಂದಾಗಿ ಸುಖಕರ ಪ್ರಯಾಣಕ್ಕೆ ಹಂಬಲಿಸುವ ಸಾರ್ವಜನಿಕರಿಗೆ ದೊಡ್ಡ ಅನುಕೂಲ ಸಿಕ್ಕಂತಾಗಿದೆ. ಈ ಬಸ್ಸಿನಲ್ಲಿ ಪ್ರಯಾಣಿಸಲು ಇಚ್ಛಿಸುವ ಸಾರ್ವಜನಿಕರು ತಮ್ಮ ಹತ್ತಿರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕೌಂಟರ್‌ಗಳಿಗೆ ಭೇಟಿ ನೀಡಿ ಮುಂಗಡ ಟಿಕೆಟ್ ಪಡೆಯಬಹುದು. ಅಥವಾ ಸಂಸ್ಥೆಯ ಅಧಿಕೃತ ಜಾಲತಾಣವಾದ www.ksrtc.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿಯೂ ಸೀಟುಗಳನ್ನು ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ


Share This News