ಕೆಲವರ ಜೀವನದಲ್ಲಿ ಈ ಪ್ರೇಮ ಎನ್ನುವುದೇ ವಿಚಿತ್ರ ಎನಿಸುತ್ತದೆ. ನಿಂತ್ರಯವಿಲ್ಲದ ಮನಸ್ಥಿತಿ ಇಟ್ಟುಕೊಂಡು ಅನಿವಾರ್ಯದ ಪ್ರೀತಿಯನ್ನು ಇತ್ತಿಚಿನ ಕೆಲ ಯುವಕರು ಬೆಳಸಿಕೊಳ್ಳತ್ತಾರೆ. ಮನೆಯವರನ್ನು ಒಪ್ಪಿಸಿ ಮದುವೆ ಆಗುತ್ತಾರೆ ಮನೆಯವರು ಒಪ್ಪಲಿಲ್ಲ ಅಂದ್ರೂ ಸಹ ಲವ್ ಮ್ಯಾರೆಜ್ ಮಾಡಿಕೊಳ್ಳುತ್ತಾರೆ. ಕೊನೆಯಲ್ಲಿ ಆಗುವುದು ಏನು? ಇಲ್ಲಿದೆ ನೋಡಿ
ಆಂಧ್ರಪ್ರದೇಶದ ಸೂರ್ಯಾಪೇಟೆ ಜಿಲ್ಲೆಯ ಕೋದಾಡದಲ್ಲಿ ಪ್ರೀತಿಸಿ ಮದುವೆಯಾತ ಹೆಂಡತಿಯನ್ನು ಪಾಪಿ ಪತಿಯೊಬ್ಬ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಗೆ ಎರಡು ವರ್ಷದ ಮಗನಿದ್ದನು. ಮಗ ಇದ್ದರೂ ಕರುಣೆಯೂ ಇಲ್ಲದೆ, ಪತಿಯೊಬ್ಬ ತನ್ನ ಪತ್ನಿಯನ್ನೇ ಸಾರ್ವಜನಿಕವಾಗಿ ಹತ್ಯೆ ಮಾಡಿದ್ದಾನೆ.
ಕೋದಾಡ ನಿವಾಸಿ ಮಣಿದೀಪ್ ಎನ್ನುವ ವ್ಯಕ್ತಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಆರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಜಗ್ಗಯ್ಯಪೇಟೆಯ ಶಿರೀಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು.
ಇವರ ಸಂಸಾರದಲ್ಲಿ ಸಮಯ ಕಳೆಯುತ್ತಾ ಕಳೆಯುತ್ತಾ ಮಣಿದೀಪ್ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ಪಡಲು ಶುರುಮಾಡಿದ್ದನು. ಇದರಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಪತಿಯ ಕಿರುಕುಳ ತಾಳಲಾರದೆ ಶಿರೀಷಾ ಈ ಹಿಂದೆ ಪೊಲೀಸರಿಗೂ ದೂರು ನೀಡಿದ್ದರು. ಹಿರಿಯರು ಸಂಧಾನ ಮಾಡಿದರೂ ಮಣಿದೀಪ್ ನಡವಳಿಕೆಯಲ್ಲಿ ಬದಲಾವಣೆ ಇರಲಿಲ್ಲ.
ಪದೆ ಪದೆ ಗಲಾಟೆ ಹಿನ್ನಲೆ, ಗ, ಶಿರೀಷಾ ತನ್ನ ಮಗನೊಂದಿಗೆ ಹೈದರಾಬಾದ್‌ನಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು. ಆದರೆ, ತನ್ನ ಪತ್ನಿ ಮನೆಯಲ್ಲಿದ್ದ 40,000 ರೂಪಾಯಿ ಹಣವ ತೆಗೆದುಕೊಂಡು ಹೋಗಿದ್ದಾಳೆ ಎಂದು ಮಣಿದೀಪ್ ಪೊಲೀಸರಿಗೆ ದೂರು ನೀಡಿದ್ದನು. ವಿಚಾರಣೆಗೆ ಹಾಜರಾಗಲು ಶಿರೀಷಾ ತನ್ನ ಮಗ ಮತ್ತು ದೊಡ್ಡಮ್ಮನ ಜೊತೆ ಕೋದಾಡ ಪೊಲೀಸ್ ಠಾಣೆಗೆ ಬಂದಿದ್ದರು. ರಾತ್ರಿಯಾದ ಕಾರಣ ಮರುದಿನ ಬರುವಂತೆ ಪೊಲೀಸರು ಹೇಳಿ ಕಳುಹಿಸಿದ್ದರು.
ಇದನ್ನು ಇತ್ತ ಕಾಯುತ್ತಿದ್ದ ಪಾಪಿ ಪತಿ ಠಾಣೆಯಿಂದ ಹೊರಬಂದ ಶಿರೀಷಾ, ಕತ್ತಿಯಿಂದ ಚುಚ್ಚಿ ಕೊಂದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿರೀಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನುವ ಮಾಹಿತಿ ತಿಳಿದು ಬಂದಿದೆ.
