ಬೆಂಗಳೂರು : ನಾನು ಮೊದಲಿಂದಲೂ ಹೇಳುತ್ತಿದ್ದೆ ಅನೇಕ ಸಾರಿ ಹೊರಗಡೆಯೂ ಹೇಳ್ತಿದ್ದೆ. ಹೈಕಮಾಂಡ್ ಯಾವಾಗ ಸೂಚಿಸ್ತಾರೆ ಆವಾಗ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ಅದರ ಪ್ರಕಾರ ಹೈಕಮಾಂಡ್ ನವರು ರಾಜೀನಾಮೆ ಕೊಡಿ ಅಂತ ಹೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಸಿದ್ದು ಹೇಳಿದ್ರು.
ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ, ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ, ಆಸ್ತಿ ಪಾಸ್ತಿ ಮಾಡಿಕೊಳ್ಳಬೇಕೆಂಬ ಯೋಚನೆ ಮಾಡಿರಲಿಲ್ಲ, 1983ರಲ್ಲಿ ಮೊದಲ ಬಾರಿ ಶಾಸಕನಾದವನು,ರಾಜಕಾರಣಕ್ಕೆ ಬಂದು ಸುಮಾರು 50 ವರ್ಷ ಆಗ್ತಾ ಬಂದಿದೆ, ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದ ತಿಳಿಸಿದ್ದಾರೆ.
ಇತ್ತ ಸಿಎಂ ರಾಜೀನಾಮೆ ನೀಡಿರುವುದು ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
