Share This News

ವೀಕ್ಷಕರೇ, ಇದು ಈ ಕ್ಷಣದ ಅತ್ಯಂತ ದೊಡ್ಡ ರಾಜಕೀಯ ಸುದ್ದಿ! ತಮಿಳುನಾಡು ರಾಜಕಾರಣದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕೀಯ ವಲಯದಲ್ಲೇ ಈಗ ದಿಗಿಲು ಮೂಡಿಸುವಂತಹ ಮಹಾ ತಿರುವು ಸಿಕ್ಕಿದೆ. ಹೌದು, ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಅಬ್ಬರದ ಮುಖವಾಗಿದ್ದ, ದ್ರಾವಿಡ ಪಕ್ಷಗಳ ನಿದ್ದೆಗೆಡಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮ್ಮ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ! ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಗೃಹ ಸಚಿವ ಅಮಿತ್ ಶಾ ಮತ್ತು ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿರುವ ಅಣ್ಣಾಮಲೈ, ಬರೋಬ್ಬರಿ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರ ಹಾಗೂ ತಮಿಳುನಾಡು ವಿಧಾನಸಭಾ ಚುನಾವಣೆಯ ಪರಾಮರ್ಶನಾ ವರದಿಯನ್ನು ಕೈಗಿಟ್ಟು ಹೊರಬಂದಿದ್ದಾರೆ.

ಯಾಕೀ ದಿಢೀರ್ ನಿರ್ಧಾರ? ತೆರೆಮರೆಯ ಅಸಲಿ ಕಥೆ ಏನು? ವೀಕ್ಷಕರೇ, ಮೇಲ್ನೋಟಕ್ಕೆ ಇದು ಸಾಮಾನ್ಯ ರಾಜೀನಾಮೆಯಂತೆ ಕಂಡರೂ, ಇದರ ಹಿಂದೆ ದಟ್ಟವಾದ ಅಸಮಾಧಾನದ ಹೊಗೆಯಾಡುತ್ತಿದೆ. ಮೂಲಗಳ ಪ್ರಕಾರ, ಇತ್ತೀಚಿನ ತಮಿಳುನಾಡು ಚುನಾವಣೆಯಲ್ಲಿ ಹೈಕಮಾಂಡ್ ತೆಗೆದುಕೊಂಡ ಕೆಲವು ನಿರ್ಧಾರಗಳು ಅಣ್ಣಾಮಲೈಗೆ ಸಮಾಧಾನ ತಂದಿರಲಿಲ್ಲ. ತಮಿಳುನಾಡಿನಲ್ಲಿ AIADMK ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕತ್ವ ಮುಂದಾಗಿತ್ತು. ಆದರೆ, “ನಾವು ಸ್ವತಂತ್ರವಾಗಿ ಬೆಳೆಯಬೇಕು, ದ್ರಾವಿಡ ಪಕ್ಷಗಳ ದಾಸರಾಗಬಾರದು” ಎನ್ನುವುದು ಅಣ್ಣಾಮಲೈ ಪಟ್ಟು ಆಗಿದೆ.ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಿಬಿಎಸ್‌ಇ 9ನೇ ತರಗತಿಗೆ ತಂದ ತ್ರಿಭಾಷಾ ಸೂತ್ರವನ್ನು ಅಣ್ಣಾಮಲೈ ಬಹಿರಂಗವಾಗಿಯೇ ಟೀಕಿಸಿದ್ದರು. ಇದು ತಮಿಳು ಜನರ ಭಾವನೆಗೆ ಧಕ್ಕೆ ತರುತ್ತದೆ ಎಂದು ಹೈಕಮಾಂಡ್ ವಿರುದ್ಧವೇ ಬ್ಯಾಟ್ ಬೀಸಿದ್ದರು. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಮೇಲೆ ಇಡೀ ರಾಜ್ಯದ ರಾಜಕೀಯ ಸಮೀಕರಣವೇ ಬದಲಾಗಿದೆ. ಯುವ ಸಮೂಹ ಈಗ ಹೊಸ ಅಲೆಯತ್ತ ಮುಖ ಮಾಡಿದೆ ಎಂಬುದನ್ನು ಅಣ್ಣಾಮಲೈ ಮನಗಂಡಿದ್ದಾರೆ.

ಮುಂದಿನ ನಡೆ ಏನು? ಹೊಸ ಪಕ್ಷದ ಮುನ್ಸೂಚನೆ? ಇದೆಯಾ. ವಿಕ್ಷಕರೇ ಈಗ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ—What Next? ಅಣ್ಣಾಮಲೈ ಮುಂದಿನ ಪ್ಲಾನ್ ಏನು?ನಮ್ಮ ಸೋರ್ಸ್‌ಗಳು ನೀಡುತ್ತಿರುವ ಪಕ್ಕಾ ಮಾಹಿತಿ ಪ್ರಕಾರ, ಅಣ್ಣಾಮಲೈ ರಾಜಕೀಯ ಸನ್ಯಾಸ ಸ್ವೀಕರಿಸುತ್ತಿಲ್ಲ. ಬದಲಿಗೆ, ತಮಿಳುನಾಡಿನಲ್ಲಿ ತಮಿಳು ಫಸ್ಟ್ ಹಾಗೂ ಜಾತ್ಯತೀತ ಸಿದ್ಧಾಂತದ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಸಜ್ಜಾಗುತ್ತಿದ್ದಾರೆ! ಮುಂದಿನ 6 ರಿಂದ 8 ತಿಂಗಳಲ್ಲಿ ಈ ಹೊಸ ರಾಜಕೀಯ ಶಕ್ತಿ ಉದಯವಾಗಲಿದೆ. ತಮಿಳು ಸಂಸ್ಕೃತಿ ಮತ್ತು ರಾಷ್ಟ್ರೀಯ ದೃಷ್ಟಿಕೋನ ಎರಡನ್ನೂ ಒಳಗೊಂಡ ವಿಭಿನ್ನ ವೇದಿಕೆ ನಿರ್ಮಿಸುವುದು ಅವರ ಗುರಿ ಎನ್ನಲಾಗುತ್ತಿದೆ.ಕರ್ನಾಟಕದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾಗ ‘ಸಿಂಗಂ’ ಅಂತಲೇ ಖ್ಯಾತರಾಗಿದ್ದ ಅಣ್ಣಾಮಲೈ, ರಾಜಕೀಯದಲ್ಲೂ ಸೈಲೆಂಟ್ ಆಗಿ ಇರಲು ಇಷ್ಟಪಡದ ವ್ಯಕ್ತಿ. ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಅತಿ ದೊಡ್ಡ ಜೂಜಿಗೆ ಕೈಹಾಕಿದ್ದಾರೆ. ಇದು ಬಿಜೆಪಿಗೆ ತಮಿಳುನಾಡಿನಲ್ಲಿ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡುತ್ತಾ? ಅಥವಾ ಅಣ್ಣಾಮಲೈ ಅವರ ವೈಯಕ್ತಿಕ ವರ್ಚಸ್ಸಿಗೆ ಹೊಸ ದಾರಿ ದೀಪವಾಗುತ್ತಾ? ಜೂನ್ 4 ರಂದು ಅವರ ಜನ್ಮದಿನವಿದ್ದು, ಅಂದೇ ತಮ್ಮ ಮುಂದಿನ ನಡೆಯನ್ನು ಅವರು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.


Share This News