ಈಗಿನ ಕಾಲದಲ್ಲಿ ನಿಯತ್ತಿಗೆ ಬೆಲೇನೇ ಇಲ್ಲಾ ಅನ್ನೋದು ಸತ್ಯ. ತಾಳಿ ಕಟ್ಟಿದ ಪತ್ನಿ ಆಸೆ ಈಡೇರಿಸೋ ಅದೆಷ್ಟೋ ಪತಿಯರಿಗೆ ಕೊನೆಗೆ ಸಿಗೋದು ಮೋಸದ ಉಡುಗೊರೆ. ಇದೀಗ ಇಂತದ್ದೇ ಪ್ರಕರಣ ಬಿಹಾರದಲ್ಲೂ ನಡೆದಿದೆ. ಬಿಹಾರದ ಹಾಜಿಪುರದ ಅಮನ್ ಕುಮಾರ್ ಎಂಬ ವ್ಯಕ್ತಿ ತನ್ನ ಪತ್ನಿ ಗುಂಜನ್ ಕುಮಾರಿಯ ಕನಸನ್ನ ನೆರವೇರಿಸಲು ತನ್ನ ಭೂಮಿ ಮಾರಿ ಆಕೆಗೆ ಶಿಕ್ಷಣ ಕೊಡಿಸಿದ್ದರು.
ಪತ್ನಿಗೆ ಸಹಕಾರ ನೀಡಿ ಮನೆ ಮಗುವನ್ನ ನೋಡಿಕಕೊಂಡಿದ್ದ ಈತನಿಗೆ ಪತ್ನಿ ಇದೀಗ ಮೋಸ ಮಾಡಿದ್ದಾಳೆ. ಪತ್ನಿ ಗುಂಜನ್ ಶಿಕ್ಷಕಿಯಾಗಿ ಸರ್ಕಾರಿ ಕೆಲಸ ಪಡೆದ ನಂತರ ಪತಿ ಹಾಗೂ 10 ವರ್ಷದ ಮಗನನ್ನೂ ಬಿಟ್ಟು ತರಬೇತಿಯ ಸಮಯದಲ್ಲಿ ಪರಿಚಯ ಆಗಿದ್ದ ಸ್ನೇಹಿತ ಹಾಗೂ ಸಹದ್ಯೋಗಿ ಪ್ರೇಮ್ ಪ್ರಕಾಶ್ ಜೊತೆ ಓಡಿಹೋಗಿದ್ದಾಳೆ
.ಪ್ರೇಮ್ ಪ್ರಕಾಶ್ ಜಯವಾಲ್ ಜೊತೆ ಹತ್ತಿರವಾಗಿ ಆತನ ಮೇಲೆ ಪ್ರೀತಿಯಾಗಿ, ಆತನೊಂದಿಗೆ ಸಂಬಂಧ ಬೆಳೆಸಿ ಕೊನೆಗೆ ತನ್ನ ಕನಸನ್ನ ನನಸು ಮಾಡಿದ ಪತಿಗೆ ಮೋಸ ಮಾಡಿದ್ದಾಳೆ. ಇದೀಗ ಪತ್ನಿಗೆ ಶಿಕ್ಷಣ ಕೊಡಿಸಿದ ತಪ್ಪಿಗೆ ಪತಿಯೇ ಶಿಕ್ಷೆಗೆ ಒಳಗಾಗಿದ್ದಾರೆ. ಪತ್ನಿ ನೋಡಲು ಅಂದವಾಗಿರೋದೆ ಹಾಗೂ ಆಕೆ ಶಿಕ್ಷಣ ಪಡೆದು ವೃತ್ತಿ ಪಡೆದಿದ್ದೇ ಪತಿಗೆ ಮುಳುವಾಗಿದೆ.
