ವಿಜಯನಗರ : ಕೂಡ್ಲಿಗಿ ಪಟ್ಟಣದ ಆರಾಧ್ಯ ದೇವತೆ ಶ್ರೀಸೊಲ್ಲಮ್ಮದೇವಿ ಜಾತ್ರೆ , ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಜರುಗಿತು. ಪ್ರಥಮವಾಗಿ ಶ್ರೀಸೊಲ್ಲಮ್ಮ ದೇವಿಗೆ ಎಡೆ , ಹಣ್ಣು , ಹೂವು , ಕಾಯಿ ಕೊಡುವುದು. ಹಾಗೂ ಕುಂಬಾರರ ಮನೆಯಿಂದ ದೇವಿಯ ಕೇಲು ಹಾಗೂ ಜಿನಿಗಾರರ ಮನೆಯಿಂದ ಉತ್ಸವ ಮೂರ್ತಿ ತಂದು , ಗಂಗಾ ಪೂಜೆಗೈದು ನಂತರ ಆಲದ ಮರದ ಬುಡದಲ್ಲಿ. ಸೊಲ್ಲದೇವಿಯ ಮೂರ್ತಿ ಪ್ರತಿಷ್ಠಾಪಿಸುವದು ಸೇರಿದಂತೆ , ಧಾರ್ಮಿಕ ನಿಯಮಾನುಸಾರ ವಿವಿದ ಕಾರ್ಯಕ್ರಮಗಳು ನಡೆದವು.
ವಿವಿದ ವಾಧ್ಯವೃಂಧಗಳೊಂದಿಗೆ , ಶ್ರೀಸೊಲ್ಲಮ್ಮದೇವಿ ಜಾತ್ರೋತ್ಸವ ಬಹು ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರ ಹರ್ಷ ಘೋಷ , ಹಾಗೂ ಜಯ ಘೋಷಗಳೊಂದಿಗೆ ಶ್ರೀಸೊಲ್ಲಮ್ಮದೇವಿ ಜಾತ್ರೋತ್ಸವ ಅಚರಿಸಿಲಾಯಿತು. ಅಂತಿಮ ಹಂತದಲ್ಲಿ. ಸಕಲ ವಾದ್ಯಗಳುಳ್ಳ ಮೆರವಣಿಗೆ ಮೂಲಕ , ಶ್ರೀಸೊಲ್ಲಮ್ಮದೇವಿಯನ್ನು ಗದ್ದುಗೆಗೆ ಕರೆತರಲಾಗುತ್ತೆ. ನೆರೆದ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ , ಶ್ರೀಸೊಲ್ಲಮ್ಮದೇವಿಗೆ ಮಹಾಮಂಗಳಾರತಿ ಬೆಳಗುವ ಮೂಲಕ ಜಾತ್ರೋತ್ಸವಕ್ಕೆ ಕಳೆ ನೀಡಲಾಯಿತು.
ಜಾತ್ರೋತ್ಸವದ ಪೂಜಾ ಕೈಂಕರ್ಯಗಳು ದೇವಿಕ ಆಚರಣೆಗಳು ಜರುಗಿದವು. ಜಾತ್ರೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕು ನೆರೆ ಹೊರೆ ತಾಲೂಕು , ವಿಜಯನಗರ ಜಿಲ್ಲೆಯ ವಿವಿದೆಡೆಗಳಲ್ಲಿಂದ ಆಗಮಿಸಿದ್ದರು.
